ಉಡುಪಿ : ನಾಲ್ಕನೇ ದಿನಕ್ಕೆ ಕಾಲಿಟ್ಟ ದಾರಿದೀಪ ಹೋರಾಟ; ಜಿಲ್ಲಾಡಳಿತದ ವಿರುದ್ಧ ಆಕ್ರೋಶ
Published
2
ಉಡುಪಿ : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ದಾರಿದೀಪದ ವ್ಯವಸ್ಥೆಯನ್ನು ಖಂಡಿಸಿ ಆರಂಭಿಸಿರುವ ಪ್ರತಿಭಟನೆಯ ನಾಲ್ಕನೇ ದಿನವಾದ ಇಂದು ನೂರು ದೊಂದಿಗಳನ್ನು ಉರಿಸಿ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿ ವಿರುದ್ಧ ಧಿಕ್ಕಾರ ಕೂಗಲಾಯಿತು.
ನಾಳೆಯ ದಿನ ಅವ್ಯವಸ್ಥೆ ಸರಿಯಾಗಿದ್ದಲ್ಲಿ ಸಂಘಟನೆಯ ನೂರು ಕಾರ್ಯಕರ್ತರೊಂದಿಗೆ ದೊಂದಿಗಳನ್ನು ಹೊತ್ತಿಸಿ ಕರಾವಳಿ ಬೈಪಾಸ್ ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆಯನ್ನು ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಅನ್ಸಾರ್ ಅಹಮದ್ ರವರು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಉಡುಪಿ ತಾಲೂಕು ಅಧ್ಯಕ್ಷರಾದ ಸುಧೀರ್ ಪೂಜಾರಿ, ಮತ್ತಾಕ್ ಅಲಿ, ರಿತೇಶ್, ಶಾಹಿಲ್ ರಹಮತುಲ್ಲಾ, ರಾಹುಲ್ ಪಿಂಟೋ, ಸುಹೇಲ್ ಉದ್ಯಾವರ, ಮನೋಜ್, ಧನಂಜಯ್ ಪುತ್ತೂರು, ಮಂಜು ಮೊದಲಾದವರು ಉಪಸ್ಥಿತರಿದ್ದರು.