ಚಂದನವನ : ನೆನ್ನೆಯಷ್ಟೇ ಪರಂವಃ ಸ್ಟುಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೊಸ ಘೋಷಣೆಯ ಬಗ್ಗೆ ಹಂಚಿಕೊಂಡಿತ್ತು. ಪರಂವಃ ಸ್ಪಾಟ್ ಲೈಟ್ ನಿರ್ಮಾಣದ ಮೊದಲ ಚಿತ್ರದ ಕುರಿತು ನಾಳೆ(ಇಂದು) ಅನೌನ್ಸ್ ಮಾಡಲಾಗುವುದು ಎಂದು ಹೇಳಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ.
ಪರಂವಃ ಸ್ಪಾಟ್ ಲೈಟ್ ನಿರ್ಮಾಣದ ಮೊದಲ ಚಿತ್ರವಾಗಿ ‘ಸ್ಟ್ರಾಬೆರಿ’ ಬರಲಿದೆ. ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಲಿರುವ ಈ ಚಿತ್ರದ ರಚನೆ, ನಿರ್ದೇಶನದ ಹೊಣೆ ಅರ್ಜುನ್ ಲೂವಿಸ್ ಹೊತ್ತಿದ್ದಾರೆ.
ಶ್ರುತಿ ಹರಿಹರನ್, ದೀಕ್ಷಿತ್ ಶೆಟ್ಟಿ, ವಿನೀತ್ ಕುಮಾರ್, ವಿಜಯ್ ಮಯ್ಯ, ಚೈತ್ರಾ ಆಚಾರ್, ಕ್ಲ್ಯಾನ್ವಿನ್ ಫೆರ್ನಾಂಡೀಸ್ ಮೊದಲಾದವರು ಚಿತ್ರದಲ್ಲಿ ಪಾತ್ರವಾಗಿದ್ದಾರೆ.
Advertisement. Scroll to continue reading.
ಪ್ರಸಾದ್ ಕೆ.ಶೆಟ್ಟಿ ಸಂಗೀತ ಸಂಯೋಜನೆ ಇರಲಿದ್ದು, ಜೋಯಲ್ ಶಮನದ ಡಿಸೋಜಾ ಛಾಯಾಗ್ರಹಣ, ರಾಹುಲ್ ವಸಿಷ್ಠ ಸಂಕಲನ ಚಿತ್ರಕ್ಕಿರಲಿದೆ.
ಇನ್ನು ಚಿತ್ರದ ಕುರಿತು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಂಚಿಕೊಂಡಿದ್ದು,
ನಮ್ಮ ಪರಂವಃ ಸ್ಪಾಟ್ ಲೈಟ್ ನಿರ್ಮಾಣದ ಮೊದಲ ಚಿತ್ರ ‘ಸ್ಟ್ರಾಬೆರಿ’. ಎಂದಿನಂತೆ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಇರಲಿ ಎಂದು ಬರೆದುಕೊಂಡಿದ್ದಾರೆ.
Advertisement. Scroll to continue reading.