ವರದಿ : ಶ್ರೀದತ್ತ ಹೆಬ್ರಿ
ಮುದ್ರಾಡಿ ನಾಟ್ಕದೂರು : ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಹಿಜಾಬ್‌ಪ್ರಕರಣದ ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಕುತಂತ್ರ, ನಮ್ಮೂರನ್ನು ತಾಲಿಬಾನ್ ಮಾಡುವ ಮೂನ್ಸೂಚನೆ. ಸರ್ಕಾರ ಮತ ಸಹಿತ ಯಾವೂದೇ ಮುಲಾಜಿಗೆ ಒಳಗಾಗದೇ ಇಲ್ಲದೆ, ಹಿಜಾಬ್ ಪ್ರಕರಣಕ್ಕೆ ಅಂತ್ಯ ಹಾಕಬೇಕಿದೆ. ನಾವೆಲ್ಲ ಸರ್ಕಾರಿ ಶಾಲೆ ಕಾಲೇಜಿನಲ್ಲಿ ಕಲಿತು ಬೆಳೆದವರು. ಆಗ ರಶಿಯ ರಮೀನಳು ಇದ್ದರು. ಈ ರಗಳೆ ಇರಲಿಲ್ಲ, ಸರ್ಕಾರಿ ಕಾಲೇಜಿನಲ್ಲಿ ಘಟನೆಗಳು ನಡೆಯುತ್ತಿರುವುದು ದುರಂತ. ನೂತನ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಎಲ್ಲಾ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸಿ ಬಗೆಹರಿಸುತ್ತಾರೆ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಅವರು ಮುದ್ರಾಡಿ ನಾಟ್ಕದೂರು ಅಭಯಹಸ್ತೆ ಆದಿಶಕ್ತಿ ಅಮ್ಮನವರ ನೂತನ ಶಿಲಾಮಯ ದೇವಸ್ಥಾನದ ಪುನರ್‌ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಗುರುವಾರ ರಾತ್ರಿ ನಡೆದ ೨ನೇ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಮುದ್ರಾಡಿ ಕ್ಷೇತ್ರ ನಿತ್ಯ ನಿರಂತರ ಬೆಳಗಲಿ ಎಂದು ಸ್ವಾಮೀಜಿ ಶುಭಹಾರೈಸಿದರು.
Advertisement. Scroll to continue reading.
ಸಚಿವ ಎಸ್. ಅಂಗಾರ ಮಾತನಾಡಿ, ಮುದ್ರಾಡಿ ಕ್ಷೇತ್ರಕ್ಕೆ ಬರುವ ಯೋಗ ದೊರೆತಿರುವುದಕ್ಕೆ ಅತ್ಯಂತ ಖುಷಿಯಾಗಿದೆ, ಧರ್ಮದ ಸೇವೆಯನ್ನು ಮಾಡುವ ಪುಣ್ಯದ ಕೆಲಸವೂ ಮುದ್ರಾಡಿಯಲ್ಲಿ ನಡೆಯುತ್ತಿದೆ, ಧರ್ಮ ಸಂಸ್ಕೃತಿ ರಾಜಕೀಯದ ಅಸ್ತ್ರ ಆಗಬಾರದು, ಎಲ್ಲಾ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಧರ್ಮವನ್ನು ಸಂರಕ್ಷಷಿ ಉಳಿಸಿ ಬೆಳೆಸಿ ಧರ್ಮದ ಮಾರ್ಗದಲ್ಲೇ ನಡೆಯಬೇಕಿದೆ ಎಂದರು.
ಧರ್ಮ ಬಿಟ್ಟು ಬದುಕು ಇಲ್ಲ, ನಮ್ಮ ಧರ್ಮವನ್ನು ನಾವು ಉಳಿಸಿದರೆ ಬದುಕು ಉಳಿಯುತ್ತದೆ. ಅನಾಹುತಗಳು ತಪ್ಪುತ್ತವೆ. ಭಕ್ತಿಯಿಂದ ಇದೆಲ್ಲ ಸಾಧ್ಯವಾಗುತ್ತದೆ. ಭಕ್ತಿಯಿಂದ ಜೀವನದಲ್ಲಿ ಮುಕ್ತಿಯು ದೊರೆಯುತ್ತದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ಮಂಜುನಾಥ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳ ಪ್ರಮುಖರಾದ ದೇವಸ್ಥಾನದ ಕಾಷ್ಠಶಿಲ್ಪಿ ಉಡುಪಿ ಮಾಧವ ಆಚಾರ್ಯ, ಮುದ್ರಾಡಿ ಗ್ರಾಮ ಪಂಚಾಯಿತಿ ಸದಸ್ಯ ಶುಭಧರ ಶೆಟ್ಟಿ ಮುದ್ರಾಡಿ, ಮಾಜಿ ಅಧ್ಯಕ್ಷೆ ಶಶಿಕಲಾ ಡಿ.ಪೂಜಾರಿ, ದೇವಸ್ಥಾನದ ನಿರ್ಮಾಣ ಕಾರ್ಯದಲ್ಲಿ ಸೇವೆ ಮಾಡಿದ ಸುಧಾಕರ ಭಂಡಾರಿ ಸಹಿತ ಹಲವರನ್ನು ಸನ್ಮಾನಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಜಗೋಳಿ ರವೀಂದ್ರ ಶೆಟ್ಟಿ, ಸೂರತ್‌ಉದ್ಯಮಿ ಮುದ್ರಾಡಿ ಮನೋಜ್‌ಸಿ ಪೂಜಾರಿ, ಇಂಡಿಯನ್‌ಓವರ್‌ಸೀಸ್‌ಬ್ಯಾಂಕ್ ನಿವೃತ್ತ ಡೆಪ್ಯುಟಿ ಮ್ಯಾನೇಜರ್ ಹೆಬ್ರಿ ಟಿ.ಜಿ.ಆಚಾರ್ಯ, ಉದ್ಯಮಿ ಪ್ರಸನ್ನ ಸೂಡ ಶಿವಪುರ, ವಾಸ್ತುತಜ್ಞ ಪ್ರಮಲ್‌ಕುಮಾರ್, ರಂಗ ನಟ ನಿರ್ದೇಶಕ ವಿಜಯ ಕುಮಾರ್‌ಕೊಡಿಯಾಲಬೈಲ್, ಹೆಬ್ರಿ ಬ್ರಹ್ಮಶ್ರೀ ನಾರಾಯಾನ ಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಭೋಜ ಪೂಜಾರಿ ಬೈದರಬೆಟ್ಟು, ದೇವಸ್ಥಾನದ ಆಡಳಿತ ಮೋಕ್ತೇಸರ ಸುಕುಮಾರ ಮೋಹನ್, ಕಾರ್ಯದರ್ಶಿ ಗಣಪತಿ ಎಂ, ಸಹ ಕಾರ್ಯದರ್ಶಿ ನವೀನ್‌ಕೋಟ್ಯಾನ್, ಕ್ಷೇತ್ರದ ಮಾತೆ ಕಮಲಾ ಮೋಹನ್, ಸುಧೀಂದ್ರ ಮೋಹನ್, ಸುರೇಂದ್ರ ಮೋಹನ್, ಉಮೇಶ್‌ಕಲ್ಮಾಡಿ, ವಿವಿಧ ಸಮಿತಿಗಳ ಪ್ರಮುಖರು, ಗಣ್ಯರು, ಜನಪ್ರತಿನಿಧಿಗಳು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
ಸುಕುಮಾರ್ ಮೋಹನ್‌ಸ್ವಾಗತಿಸಿ, ಪ್ರಜ್ಞಾ ನಿರೂಪಿಸಿದರು.
Advertisement. Scroll to continue reading.