ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಮಟಪಾಡಿ ನಿವೃತ್ತ ಮುಖ್ಯೊಪಾಧ್ಯಾಯ ದಿವಂಗತ ಶಿವರಾಮ ಶೆಟ್ಟಿ ಅವರ 6ನೇ ಪುಣ್ಯ ತಿಥಿ ಪ್ರಯುಕ್ತ ಮಟಪಾಡಿ ಬಲ್ಜಿ ಕೊರಗ ಮಕ್ಕಳಿಗೆ ಶಾಲಾ ಪರಿಕರ ವಿತರಣೆ ಹಾಗೂ 8 ಕೊರಗ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಗುರುವಾರ ಕಾಲೋನಿಯ ಸಮುದಾಯ ಭವನದಲ್ಲಿ ಜರುಗಿತು.
ಈ ಸಂದರ್ಭ ರೆಡ್ ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಅಧ್ಯಕ್ಷ ಶಿವರಾಮ ಶೆಟ್ಟಿ ಅವರ ಮಗ ಬಸ್ರೂರು ರಾಜೀವ್ ಶೆಟ್ಟಿ ಮಾತನಾಡಿ, ತಂದೆಯವರಿಗೆ ಸಮಾಜದಿಂದ ದೂರ ಇದ್ದವರು ಹಾಗೂ ಸಾಮಾಜಿಕ ವ್ಯವಸ್ಥೆಯಿಂದ ತೊಂದರೆಗೆ ಒಳಗಾದವರ ಕುರಿತು ವಿಶೇಷ ಮುತುವರ್ಜಿ ಕೊರಗ ಮಕ್ಕಳು ಶಿಕ್ಷಣ ಪಡೆದು ಮುಂದುವರಿಯಬೇಕು ಎನ್ನುವುದು ಅವರ ಉದ್ದೇಶವಾಗಿತ್ತು ಅವರ ಕನಸನ್ನು ನನಸು ಮಾಡಿದ ಸಂತೃಪ್ತಿ ನಮಗಿದೆ ಎಂದರು
ಕೊರಗ ಮುಖಂಡ ಗಣೇಶ್ ಬಾರಕೂರು ನೆರವು ನೀಡಿದ ಕುರಿತು ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ದೇವದಾಸ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಗಣೇಶ್ , ಮಾಜಿ ತಾಪಂ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ, ಹಂದಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶೋಭಾ ಪೂಜಾರಿ, ಸದಸ್ಯೆಯರಾದ ಪವಿತ್ರ ಗಣೇಶ್, ಭಾನುಮತಿ, ಜ್ಯೋತಿ ಬಾಯಿ ಹಾಗೂ ಚಂದ್ರ ಶೇಖರ್ ಮಾಲ್ತಾರ್ ಉಪಸ್ಥಿತರಿದ್ದರು.
ಸಹ ಶಿಕ್ಷಕಿ ಸವೀಶಾ ಕಾರ್ಯಕ್ರಮ ವಂದಿಸಿದರು. ಕೊರಗ ಕಾಲೋನಿಯ ವಿಶೇಷ ತರಗತಿ ಬೋಧನಾ ಶಿಕ್ಷಕಿ ನವ್ಯಾ ನಿರೂಪಿಸಿದರು
Advertisement. Scroll to continue reading.