ಉಡುಪಿ : ಎಂಜಿಎಂ ಕಾಲೇಜಿನಲ್ಲೂ ಹಿಜಾಬ್ vs ಕೇಸರಿ ವಿವಾದ; ಕಾಲೇಜಿಗೆ ರಜೆ ಘೋಷಣೆ
Published
1
ಉಡುಪಿ : ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ದಿನದಿಂದ ದಿನಕ್ಕೆ ಭಾರೀ ಸದ್ದು ಮಾಡುತ್ತಿದೆ. ಹಿಜಾಬ್ ತೊಟ್ಟು ಬಂದ ವಿದ್ಯಾರ್ಥಿನಿಯರ ತಡೆ ಹಿನ್ನೆಲೆಯಲ್ಲಿ ಉಡುಪಿಯ ಎಂಜಿಎಂ ಕಾಲೇಜು ಮುಂದೆ ಭಾರಿ ಜಟಾಪಟಿ ನಡೆದಿದೆ.
ಇಂದು ಎಂಜಿಎಂ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ತೊಟ್ಟು ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರನ್ನು ತಡೆದಿದ್ದು, ಈ ವೇಳೆ ಅವರು ಒಳ ಬಿಡಲು ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕೇಸರಿ ಶಾಲು, ಪೇಟ ಧರಿಸಿ ಬಂದ ವಿದ್ಯಾರ್ಥಿಗಳು ಜೈ ಶ್ರೀರಾಮ್ ಎಂಬ ಘೋಷಣೆ ಕೂಗುತ್ತಾ ಕಾಲೇಜು ಸುತ್ತುವರೆದಿದ್ದಾರೆ. ಪರ – ವಿರೋಧ ಘೋಷಣೆ ಘೋಷಣೆ ಕೂಗಿದ್ದಾರೆ. ಗಲಾಟೆ ತೀವ್ರತೆ ಪಡೆಯುತ್ತಿದ್ದಂತೆ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಹೈಕೋರ್ಟ್ ತೀರ್ಪಿನ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆಡಳಿತ ಮಂದಿ ನಿರ್ಧರಿಸಿದೆ.