ಕರಾವಳಿ

ಕೋಟ: ಬಿಜೆಪಿಯಿಂದ ಕಾಂಗ್ರೆಸ್ ಪಕ್ಷ ಹಿಂದೂ ಧರ್ಮದ ಬಗ್ಗೆ ಕಲಿಯ ಬೇಕಾಗಿಲ್ಲ : ಅಜಿತ್ ಕುಮಾರ್ ಶೆಟ್ಟಿ

2

ವರದಿ : ದಿನೇಶ್ ರಾಯಪ್ಪನಮಠ

ಕೋಟ: ಇತ್ತೀಚೆಗೆ ನಮ್ಮ ಧರ್ಮದ ದೇಗುಲಗಳನ್ನು ದ್ವಂಸಗೊಳಿಸಿದ ಈ ಬಿಜೆಪಿ ಸರಕಾರದಿಂದ ಕಾಂಗ್ರೆಸ್ ಪಕ್ಷ ಹಿಂದೂ ಧರ್ಮದ ಬಗ್ಗೆ ಕಲಿಯಬೇಕಾದದು ಇಲ್ಲ. ಕರ್ನಾಟಕದಲ್ಲಿ ಇತ್ತೀಚಿಗೆ ನಡೆದ ಬೈ ಇಲೆಕ್ಷನ್ ಹಾಗೂ ಸ್ಥಳೀಯಾಡಳಿತ ಚುನಾವಣೆಯಲ್ಲಿ ಸೋತಿರುವ ಬಿಜೆಪಿಯ ಕೊನೆಯ ಅಸ್ತ್ರ ಈ “ಹಿಜಾಬ್” ವಿಷಯ
ನಾವಿನ್ನೂ ಉಡುಪಿಯ ಹಿಜಾಬ್ ವಿಷಯಕ್ಕೆ ಎಂಟ್ರಿ ಕೊಟ್ಟಿಲ್ಲ, ಕೊಟ್ಟರೆ ಆ ಮೇಲೆ ಅದರ ಕತೆಯೇ ಬೇರೆ” ಎಂದು ರಾಜ್ಯಾಧ್ಯಕ್ಷ ಮಜೀದ್ ತೊಡೆತಟ್ಟಿದ್ದರು. ಈಗ ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ “ಹಿಜಾಬ್ ವಿವಾದ ನಿಲ್ಲಿಸುವುದು ಹಿಂದುತ್ವ ಸಂಘಟನೆಗಳಿಗೆ ಐದು ನಿಮಿಷದ ಕೆಲಸ” ಎಂದು ಕಣ್ಣು ಕೆಕ್ಕರಿಸಿದ್ದಾರೆ.
ಇಲ್ಲಿ ವಿಷಯ ಸ್ಪಷ್ಟ. ಎ ತಂಡ ಹಾಗೂ ಬಿ ತಂಡ ಯೋಜನಾ ಬದ್ದವಾಗಿ ಪೂರ್ವನಿರ್ಧರಿತ ಆಟ ಆಡುತ್ತಿವೆ. ವಿದ್ಯಾರ್ಥಿಗಳು, ಪೋಷಕರು, ಬೆಂಬಲಿಗರು ಕೊನೆಗೆ ಎರಡೂ ಧರ್ಮೀಯರು ಹೊಡೆದುಕೊಂಡು ಸಾಯಿರಿ ಕರಾವಳಿ ಜಿಲ್ಲೆಗಳು ಈ ಎರಡೂ ಬಣದ ಕೋಮುವಾದಿಗಳ ಆಟ ಆಡಲಿಕ್ಕೆ ಇರುವ ಮೈದಾನದಂತೆ ಇದೆ.
ಇದರ ಹಿಂದೆ ಬಿಜೆಪಿಯ ಮುಖಂಡರುಗಳು ಬಿಜೆಪಿ ಯ ಬಿ ಟೀಮ್ ಆದ ಎಸ್ ಡಿ ಪಿ ಐ ಪಕ್ಷದ ನಡುವೆ ನಡೆದ ಒಪ್ಪಂದದ ಪರಿಣಾಮವೇ ಈ ಹಿಜಾಬ್ ಗಲಾಟೆ ನನ್ನ ಹಿಂದೂ ಸಹೋದರರೇ ಹಿಂದೂ ಸಂಘಟನೆಯ ಮುಖಂಡರುಗಳೇ ಕಾಂಗ್ರೆಸ್ ಪಕ್ಷಕ್ಕೆ ಹಿಂದೂ, ಮುಸಲ್ಮಾನ್ ಎಲ್ಲಾ ಧರ್ಮದ ಮೇಲು ಸಮಾನವಾದ ಬಾವನೆ ಇದೆ ಒಂದು ವೇಳೆ ಸುಮಾರು 60 ವರ್ಷ ಈ ದೇಶ ಆಳಿದ ಕಾಂಗ್ರೆಸ್ ಪಕ್ಷಕ್ಕೆ ಎಲ್ಲಿ ಆದರೂ ಹಿಂದೂ ಧರ್ಮದ ಮೇಲೆ ಪ್ರೀತಿ ಇಲ್ಲದೆ ಇದ್ದರೇ ನನ್ನ ಧರ್ಮ ಇಷ್ಟು ಎತ್ತರಕ್ಕೆ ಬೆಳೆಯಲು ಅಸಾಧ್ಯ ಬಿಜೆಪಿಯವರಿಗೆ ನೈತಿಕತೆ ಇದ್ದರೆ ಕೋಮುವಾದಿ ಸಂಘಟನೆ ಯಾವುದೇ ಇರಲಿ ಮುಸ್ಲಿಂ ಅಥವಾ ಹಿಂದೂ ಸಂಘಟನೆಯನ್ನು ಗುರುತಿಸಿ ನಿಷೇದ ಮಾಡಿ ತೋರಿಸಲಿ ನಿಮ್ಮ ನಿಮ್ಮ ರಾಜಕೀಯ ಭವಿಷ್ಯಕ್ಕೆ ಕರಾವಳಿ ಬಾಗದ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಿದ್ದೀರಿ.
ಎಂದು ಯುವ ಕಾಂಗ್ರೆಸ್ ನ ರಾಜ್ಯ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com