ಕರಾವಳಿ

ಹೆಬ್ರಿ: ಅಲ್ಬಾಡಿಯಲ್ಲಿ ಬಹಳ ಅಪರೂಪದ 2 ತಲೆಯ ಕರು ಜನನ

8

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ: ತಾಲ್ಲೂಕಿನ ಅಲ್ಬಾಡಿ ಗ್ರಾಮದ ಅಂಗಡಿ ಮನೆ ಅಣ್ಣಪ್ಪ ನಾಯ್ಕ ಎಂಬುವರ ಮನೆಯಲ್ಲಿ ಬಲು ಅಪರೂಪದ 2 ತಲೆಯ ಹೆಂಗರು ಜನನವಾದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಕರು ಸಹಜವಾಗಿ ಜನನ ಆಗದಿದ್ದಾಗ ವೈದ್ಯರು ಆಗಮಿಸಿ ಶಸ್ತ್ರಚಿಕಿತ್ಸೆ ನಡೆಸಿ ಕರುವನ್ನು ತೆಗೆದಿದ್ದಾರೆ. ಆದರೆ ಕರು ಜನನವಾದ ಕೆಲವೇ ಕ್ಷಣದಲ್ಲಿ ಮೃತಪಟ್ಟಿದೆ. ಹುಟ್ಟಿದ ಕರುವನ್ನು ನೋಡಿದ ಮನೆಯವರು ಆಶ್ಚರ್ಯಗೊಂಡಿದ್ದು, ಅಲ್ಬಾಡಿ ಗ್ರಾಮದಲ್ಲಿ ಇದು ಮೊದಲ ಪ್ರಕರಣವಾಗಿದೆ.

Advertisement. Scroll to continue reading.

ಈ ಅಪರೂಪದ ಕರುವನ್ನು ನೋಡಲು ಶನಿವಾರ ನೂರಾರು ಜನ ಅಣ್ಣಪ್ಪ ನಾಯ್ಕರ ಮನೆಗೆ ಬರುತ್ತಿದ್ದಾರೆ.


Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com