ಬ್ರಹ್ಮಾವರ : ಹಿಜಾಬ್ ಹಿನ್ನೆಲೆಯಲ್ಲಿ ಕೆಲವು ದಿನದಿಂದ ತರಗತಿಗೆ ರಜೆ ನೀಡಿದ್ದು, ಇಂದು ರಾಜ್ಯದಾದ್ಯಂತ ಹೈಸ್ಕೂಲ್ ತರಗತಿ ಆರಂಭಗೊಂಡಿದೆ. ಬ್ರಹ್ಮಾವರ ತಾಲೂಕಿನ ಸರಕಾರಿ ಅನುದಾನಿತ ಮತ್ತು ಅನುದಾನ ರಹಿತ ಒಟ್ಟು 65 ಹೈಸ್ಕೂಲುಗಳು ಇಂದು ತರಗತಿ ಆರಂಭಗೊಂಡಿತು.
ಬೆಳಿಗ್ಗೆ ಎಲ್ಲಾ ಶಾಲೆಗಳಿಗೆ ಬ್ರಹ್ಮಾವರ ವ್ರತ್ತ ನಿರೀಕ್ಷಕ ಅನಂತ ಪದ್ಮನಾಭ ಅವರ ಮಾರ್ಗದರ್ಶನದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಆರಕ್ಷಕ ಠಾಣಾಧಿಕಾರಿ ಗುರುನಾಥ್ ಬಿ. ಹಾದಿಮನೆ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿದ್ದರು.
Advertisement. Scroll to continue reading.
ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಬ್ರಹ್ಮಾವರ ಬೋರ್ಡ್ ಶಾಲೆಯಲ್ಲಿ 580 ವಿದ್ಯಾರ್ಥಿಗಳು ಎಲ್ಲರೂ ಹಾಜರಿದ್ದು, ಬಹುತೇಕ ಶಾಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಹಾಜರಿದ್ದರು ಎಂದು ಬ್ರಹ್ಮಾವರ ಬಿ ಇ.ಓ ಬಿ.ಟಿ ನಾಯ್ಕ್ ತಿಳಿಸಿದ್ದಾರೆ.