ಬ್ರಹ್ಮಾವರ: ಧರ್ಮದ ವಿಷಯ ಬಂದಾಗ ಹಿಂದುಗಳೆಲ್ಲರೂ ಒಂದೇ ಹೂವಿನ ಮಾಲೆಯಾಗೋಣ: ಶ್ರೀ ನೃಸಿಂಹಾಶ್ರಮ ಸ್ವಾಮೀಜಿ
Published
1
ಬ್ರಹ್ಮಾವರ: ಧರ್ಮ ದೇವರು ಧಾರ್ಮಿಕ ಆಚರಣೆಗಳು ಭಾರತದ ಏಕತೆಯ ಸಂಕೇತ. ಇಲ್ಲಿ ಹಿಂದುಗಳಲ್ಲಿ ಹಲವಾರು ಜಾತಿಗಳು ಅಂದರೆ ನಾನಾ ರೀತಿ ಹೂವಿನಂತೆ. ಎಲ್ಲಾ ಹೂವುಗಳು ಮಾಲೆಯಾಗಿ ದೇವರಿಗೆ ಸಮರ್ಪಣೆಯಾದಂತೆ ಧರ್ಮದ ವಿಷಯ ಬಂದಾಗ ಹಿಂದುಗಳೆಲ್ಲರೂ ಒಂದೇ ಹೂವಿನ ಮಾಲೆಯಾಗೋಣ ಎಂದು ಶ್ರೀ ಮಠ ಬಾಳೇಕುದ್ರು ವಿನ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರು ಹೇಳಿದರು.
ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನ ಸಾಲಿಕೇರಿಯಲ್ಲಿ ಫೆಬ್ರವರಿ 10 ರಿಂದ 19 ರ ತನಕ ನಾನಾ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಜರುಗುವ ಅಷ್ಠಬಂಧ ಬ್ರಹ್ಮಕಲಶಾಭಿಷೇಕ ಮತ್ತು ಶ್ರೀ ಭದ್ರಕಾಳಿ ಅಮ್ಮನವರ ಪ್ರತಿಷ್ಠೆ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಘು ಶೆಟ್ಟಿಗಾರ್ ಕುಂಚಿಮನೆ ಕ್ಷೇತ್ರದ ಪರಿಚಯ ಮಾಡಿದರು. ಶೃಂಗೇರಿ ಮಠದ ಉಡುಪಿ ಪ್ರಾಂತೀಯ ಧರ್ಮಾಧಿಕಾರಿ ವಾಗೀಶ್ ಶಾಸ್ತ್ರೀ ಧಾರ್ಮಿಕ ಪ್ರವಚನ ನೀಡಿದರು.
ವಾರಂಬಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗುಲಾಬಿ, ಮಾಜಿ ಸಂಸದ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಎಂ.ಡಿ. ಲಕ್ಷ್ಮೀ ನಾರಾಯಣ, ದೇವಸ್ಥಾನದ ಆಡಳಿತ ಮೋಕ್ತೇಸರ ಬಾಲಕೃಷ್ಣ ಶೆಟ್ಟಿಗಾರ್, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಭಗವಾನ್ ದಾಸ್ ಕಿನ್ನಿಮೂಲ್ಕಿ , ಉತ್ತಮ ಶೆಟ್ಟಿಗಾರ್ ಮುಂಬಾಯಿ, ಕೃಷ್ಣಾನಂದ ಶೆಟ್ಟಿಗಾರ್ ಮುಂಬಾಯಿ ಇನ್ನಿತರ ಅನೇಕ ಗಣ್ಯರು ಉಪಸ್ಥಿತರಿದ್ದರು.