ಕರಾವಳಿ

ಬ್ರಹ್ಮಾವರ : ತೀರಾ ಕಿರಿದಾಗಿದೆ ಶಾಲೆಗೆ ಹೋಗುವ ರಸ್ತೆ; ವಿದ್ಯಾರ್ಥಿಗಳಿಗೆ ಸಂಚರಿಸಲು ತೊಡಕು, ರಸ್ತೆ ಅಗಲೀಕರಣಕ್ಕೆ ಬೇಡಿಕೆ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಬ್ರಹ್ಮಾವರ ಪ್ರಾಥಮಿಕ ಬೋರ್ಡ್‌ ಶಾಲೆ, ಅಂಗನವಾಡಿ, ಹೈಸ್ಕೂಲ್ ಮತ್ತು ಪದವಿ ಪೂರ್ವ ಶಾಲೆಗೆ ಹೋಗುವ ಒಂದೆ ರಸ್ತೆ ತೀರಾ ಕಿರಿದಾಗಿದ್ದು, ಶಾಲಾ ಮಕ್ಕಳು ಸಂಚಾರಕ್ಕೆ ತೊಡಕಾಗಿದೆ.

ಬ್ರಹ್ಮಾವರ ಬಸ್ ನಿಲ್ದಾಣದಿಂದ ಅಂಚೆ ಕಛೇರಿ, ಮೆಸ್ಕಾಂ ಕಛೇರಿ ಪಾಸ್ ಪೋರ್ಟ್ ಕಛೇರಿ, ಪೋಲೀಸ್ ಠಾಣೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಲಕ ರಥ ಬೀದಿಗೆ ಹೋಗುವ ತೀರಾ ಅಗಲ ಕಿರಿದಾದ ರಸ್ತೆ ಇದಾಗಿದೆ.
ಅದೆಷ್ಟೋ ವರ್ಷದ ಹಿಂದೆ ಇದ್ದ ಕಾಲು ದಾರಿಯನ್ನು ರಸ್ತೆ ಮಾಡುವಾಗ ಇಲ್ಲಿ 126 ವರ್ಷದ ಪ್ರಾಥಮಿಕ ಶಾಲೆ ಮಾತ್ರ ಇತ್ತು. ಇಲ್ಲಿ ಅಂಗನವಾಡಿಯಲ್ಲಿ 40, ಪ್ರಾಥಮಿಕ ಶಾಲೆಯಲ್ಲಿ 584, ಪ್ರೌಢ ಶಾಲೆಯಲ್ಲಿ 900 ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ 370 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

Advertisement. Scroll to continue reading.

ಬೆಳಗಿನ ಹೊತ್ತು ಮತ್ತು ಸಂಜೆ ಸಮಯ ಒಂದೇ ಸಮಯದಲ್ಲಿ ಶಾಲೆಯ ತರಗತಿಗಳು ಆರಂಭಗೊಳ್ಳುವಾಗ ದೂರದಿಂದ ಬಸ್ ನಲ್ಲಿ ಬರುವ ವಿದ್ಯಾರ್ಥಿಗಳು ಅಟೋ ರಿಕ್ಷಾ ಮತ್ತು ಕೆಲವರು ಇನ್ನಿತರ ವಾಹನದಲ್ಲಿ ಬರುವಾಗ ಇಲ್ಲಿ ಒಮ್ಮೆಗೆ 2000 ಮಂದಿಯಷ್ಟು ಜನ ಸಂದಣಿಯಾಗಿ, ಮಕ್ಕಳನ್ನು ಕರೆದುಕೊಂಡು ಹೋಗಲು ಬರುವ ಅಟೋಗಳು ಇನ್ನಿತರ ವಾಹನ ಸಂಚಾರಕ್ಕೆ ಮತ್ತು ನಡೆದಾಡಲು ತೀರಾ ಕಷ್ಠವಾಗುತ್ತಿದೆ.

ಪ್ರಾಥಮಿಕ ಶಾಲೆಯ ಕೆಲವು ಮಕ್ಕಳನ್ನು ಕರೆದುಕೊಂಡು ಹೋಗಲು ಬರುವ ಅವರ ಪೋಷಕರು ಕಾದು ಕುಳಿತು ಕರೆದುಕೊಂಡು ಹೋಗಲು ಕೂಡಾ ಹರ ಸಾಹಸ ಪಡಬೇಕಾಗುತ್ತದೆ.
ರಾಷ್ಟ್ರೀಯ ಹೆದ್ದಾರಿ ಆಗುವ ಮೊದಲು ಅರಣ್ಯ ಇಲಾಖೆಯ ವಸತಿಗೃಹದ ಬದಿಯಿಂದ ಬರುವ ರಸ್ತೆಯೊಂದು ಇದ್ದು ಮುಂದೆ ಕೂಡಾ ಇಲ್ಲಿ ಏಕಮುಖ ಸಂಚಾರಕ್ಕೆ ಅನುವು ಮಾಡಿದಲ್ಲಿ ಶಾಲೆಯ ಎದುರು ಭಾಗದ ದಾರಿ ಮೂಲಕ ಸಂಚರಿಸಿದರೆ ಪ್ರಾಥಮಿಕ ಶಾಲಾ ವಿದ್ಯಾಥಿಗಳಿಗೆ ಅನುಕೂಲವಾಗಲಿದೆ.

ಕೆಲವು ತೀರಾ ಚಿಕ್ಕ ಮಕ್ಕಳು ಬಸ್ ನಲ್ಲಿ ಹೋಗುವವರು ಇಲ್ಲಿ ಸಂಚರಿಸಲು ಗೊಂದಲ ಉಂಟಾಗುತ್ತದೆ. ಪ್ರತೀ ವಾರದ ಸಂತೆ ಸೋಮವಾರ ಸಂಜೆ ಹೊತ್ತು ಸಂಚರಿಸುವಂತೆ ಇಲ್ಲ.
ಕೇವಲ ಅರ್ದ ಕಿಮಿ ದೂರದ ಈಗೀರುವ ರಸ್ತೆಯನ್ನು ಅಗಲೀಕರಣ ಮಾಡಿ 2 ಕಡೆಯಲ್ಲಿ ಪುಟ್ ಪಾತ್ ಮಾಡಿದಲ್ಲಿ ವಾಹನ ಸಂಚಾರಕ್ಕೆ ಸುಗಮವಾಗ ಬಹುದು ಸಂಭಂದ ಪಟ್ಟವರು ಈ ಕೆಲಸವನ್ನು ಅತೀ ಶೀಘ್ರದಲ್ಲಿ ಮಾಡ ಬೇಕಾಗಿದೆ .

ಅನೇಕ ವರ್ಷದ ಹಿಂದೆ ಇದ್ದ ರಸ್ತೆ ಇದು. ಇದನ್ನು ಅಗಲೀಕರಣ ಮಾಡಲು ಗ್ರಾಮ ಪಂಚಾಯತಿಯ ಸಭೆಯಲ್ಲಿ ಮಾತನಾಡುತ್ತೇನೆ ಮತ್ತು ಶಾಸಕರ ಗಮನಕ್ಕೆ ಕೂಡಾ ತಂದು ರಸ್ತೆ ಅಗಲೀಕರಣ ಮಾಡುವ ಪ್ರಯತ್ನ ಮಾಡುತ್ತೇನೆ.ದೇವಾನಂದ ನಾಯಕ್, ಸದಸ್ಯ, ವಾರಂಬಳ್ಳಿ ಗ್ರಾಮಪಂಚಾಯತಿ

ಅಂಗನವಾಡಿಯಿಂದ ಪದವಿ ಪೂರ್ವ ಶಿಕ್ಷಣದ ತನಕ ಇಲ್ಲಿ ಶಿಕ್ಷಣ ಸಂಸ್ಥೆ ಇರುವುದರಿಂದ ಇಲ್ಲಿ ಸಂಚಾರ ವ್ಯವಸ್ಥೆಗೆ ತೀರಾ ತೊಂದರೆಯಾಗುತ್ತಿರುವುದು ಸಾರ್ವಜನಿಕರಿಂದ ದೂರು ಬಂದಿದೆ. ಇಲಾಖಾ ಮಟ್ಟದಲ್ಲಿ ಗಮನ ಸೆಳೆದು ರಸ್ತೆ ಅಗಲೀಕರಣ ಮಾಡಲು ಪ್ರಯತ್ನ ಮಾಡುತ್ತೇನೆ.ಬಿ.ಟಿ.ನಾಯ್ಕ್ , ಕ್ಷೇತ್ರ ಶಿಕ್ಷಣಾಧಿಕಾರಿ, ಬ್ರಹ್ಮಾವರ

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com