ಸವಣಾಲು : ಕಾಳಿಬೆಟ್ಟ ಶ್ರೀದುರ್ಗಾಕಾಳಿಕಾಂಬ ಕ್ಷೇತ್ರದ ಜಾತ್ರಾ ಮಹೋತ್ಸವ ಸಂಪನ್ನ
Published
0
ಬೆಳ್ತಂಗಡಿ : ಸವಣಾಲು ಗ್ರಾಮದ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರ, ಕಾಳಿಬೆಟ್ಟದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಫೆ.14 ರಿಂದ 16 ರ ವರೆಗೆ ವಿಜ್ರಂಭಣೆಯಿಂದ ನಡೆಯಿತು.
ಫೆ.14 ರಂದು ಗಣಪತಿ ಪೂಜೆಯಿಂದ ಮೊದಲ್ಗೊಂಡು, ಯಾಗ ಶಾಲೆ ಪ್ರವೇಶ, ನಾಗ ಸನ್ನಿಧಾನದಲ್ಲಿ ಹೋಮ, ಅನ್ನಸಂತರ್ಪಣೆ, ಕಾಳಿಗುಡಿಯಲ್ಲಿ ರಾತ್ರಿ ಹೂವಿನ ಪೂಜೆ, ರಂಗ ಪೂಜೆ ಹಾಗೂ ಅಷ್ಟಾವದಾನ ಸೇವೆ ನೆರವೇರಿತು.
ಫೆ.15 ರಂದು ಕಾಳಿಗುಡಿಯಲ್ಲಿ ಚಂಡಿಕಾಹೋಮ, ವಿಶೇಷ ಪೂಜೆ, ಅನ್ನಸಂತರ್ಪಣೆ, ರಾತ್ರಿ ದೇವರ ಬಲಿ, ವಸಂತ ಮಂಟಪದಲ್ಲಿ ಶ್ರೀ ದೇವಿಗೆ ಅಷ್ಟಾವದಾನ ಸೇವೆ, ಮೂಲದುರ್ಗಾ ಗುಡಿಯಲ್ಲಿ ರಂಗ ಪೂಜೆ, ವಿಶೇಷ ಪೂಜೆ, ಅನ್ನಸಂತರ್ಪಣೆ ನೆರವೇರಿತು.
ಫೆ.16 ರಂದು ಓಕುಳಿ, ಚಂಡಿಕಾಹೋಮ, ಅನ್ನಸಂತರ್ಪಣೆ ನೆರವೇರಿತು. ಇದರೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವ ಸಮಾಪ್ತಿಗೊಂಡಿತು.
ಊರ ಹಾಗೂ ಪರವೂರ ಭಕ್ತರೆಲ್ಲರೂ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಶ್ರೀ ದುರ್ಗಾಕಾಳಿಕಾಂಬ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾದರು.