ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಉಡುಪಿ ಜಿಲ್ಲೆ ನೂತನ ಹೆಬ್ರಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ನವೀನ್ ಕೆ ಅಡ್ಯಂತಾಯ ಅವರನ್ನು ಜಿಲ್ಲಾಧ್ಯಕ್ಷ ಡಾ.ಸುಬ್ರಹ್ಮಣ್ಯ ಭಟ್ ಬೈಂದೂರು ನೇಮಿಸಿದ್ದಾರೆ.
ಸಮಾಜಸೇವಕರಾಗಿ ಸಹಕಾರಿ ಕ್ಷೇತ್ರದ ದುರೀಣರಾಗಿರುವ ನವೀನ್ ಕೆ. ಅಡ್ಯಂತಾಯ ವಿವಿಧ ಸಂಘಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದಾರೆ. ಉಪಾಧ್ಯಕ್ಷರಾಗಿ ಟಿ.ಜಿ.ಆಚಾರ್ಯ, ಮಹಿಳಾ ಉಪಾಧ್ಯಕ್ಷರಾಗಿ ಸುನೀತಾ ಅರುಣ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಧರ ಹೆಬ್ಬಾರ್ ಕಾಪೋಳಿ ಕಬ್ಬಿನಾಲೆ, ಕೋಶಾಧ್ಯಕ್ಷರಾಗಿ ಎಚ್.ಜನಾರ್ಧನ್ ಹೆಬ್ರಿ, ಸಹ ಕಾರ್ಯದರ್ಶಿಯಾಗಿ ನಿತೀಶ್ ಎಸ್ ಪಿ, ಸಂಘಟನಾ ಕಾರ್ಯದರ್ಶಿಯಾಗಿ ಬೇಳಂಜೆ ಹರೀಶ ಪೂಜಾರಿ, ಸಂಚಾಲಕರಾಗಿ ಪ್ರವೀಣ್ ಸೂಡ ಕೆರೆಬೆಟ್ಟು, ಮಹಿಳಾ ಸಂಚಾಲಕರಾಗಿ ಸುನಂದ ಕುಲಾಲ್ ಶಿವಪುರ, ನಿರ್ದೇಶಕರಾಗಿ ಶಿಕ್ಷಕ ನಿತ್ಯಾನಂದ ಶೆಟ್ಟಿ ಶಿವಪುರ, ಅಶೋಕ್ ಪ್ರಭು ಹೆಬ್ರಿ, ಬಲ್ಲಾಡಿ ಚಂದ್ರಶೇಖರ ಭಟ್, ಶಶಿಕಲಾ ಪೂಜಾರಿ ಚಾರ, ಸುಜಾತ ಶೆಟ್ಟಿ ಕುಚ್ಚೂರು, ಸುಧಾ ಜಿ. ನಾಯಕ್ ಚಾರ ಮತ್ತು ಅಕ್ಷಿತಾ ಕೆ. ಶೆಟ್ಟಿ ಸೋಮೇಶ್ವರ ಅವರನ್ನು ಆಯ್ಕೆ ಮಾಡಲಾಗಿದೆ.
Advertisement. Scroll to continue reading.
ಜೊತೆಗೆ ಹೆಬ್ರಿ ಘಟಕದ ಮಾರ್ಗದರ್ಶಕರು, ಗೌರವ ಸಲಹೆಗಾರರು ಮತ್ತು ಸದಸ್ಯರಾಗಿ ಹಲವು ಮಂದಿಯನ್ನು ನೇಮಿಸಲಾಗಿದೆ.