ಬ್ರಹ್ಮಾವರ: ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀದುರ್ಗಾ ಪರಮೇಶ್ವರೀ ದೇವಸ್ಥಾನ ಬಾರಕೂರಿನಲ್ಲಿ ಫೆಬ್ರವರಿ 18 ರಿಂದ 20 ರತನಕ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಹಾಲು ಹಬ್ಬ , ವಾರ್ಷಿಕ ಪೂಜೆ ಮತ್ತು ಗೆಂಡ ಸೇವೆಯ ಅಂಗವಾಗಿ ಶುಕ್ರವಾರ ದೇವಸ್ಥಾನದಲ್ಲಿ ಶ್ರೀನಿವಾಸ್ ಶೆಟ್ಟಿಗಾರ್ ರಂಗನಕೆರೆ ಮತ್ತು ಯಶೋಧ ಶೆಟ್ಟಿಗಾರ್ ದಂಪತಿಗಳಿಂದ ರಮೇಶ್ ಭಟ್ ನಾಯರ್ ಬೆಟ್ಟು ಇವರ ನೇತೃತ್ವದಲ್ಲಿ ಸೇವಾ ರೂಪದಲ್ಲಿ ಚಂಡಿಕಾ ಹೋಮ ಜರುಗಿತು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ನವಕ ಪ್ರಧಾನ, ನವಕುಂಭ ಕಲಶ ಸ್ಥಾಪನೆ, ಅಧಿವಾಸ ಹೋಮ, ಕಲಶಾಭಿಷೇಕ ಮಹಾ ಪೂಜೆ ಜರುಗಿತು.
ಆಡಳಿತ ಮೋಕ್ತೇಸರ ಡಾ.ಜಯರಾಮ ಶೆಟ್ಟಿಗಾರ್ ಸಹ ಮೊಕ್ತೇಸರರು ಮತ್ತು ಆಡಳಿತ ಮಂಡಳಿ, ಮಾಗಣೆ ಗುರಿಕಾರರು, ಬ್ರಹ್ಮಕಲಶೋತ್ಸವ ಸಮಿತಿ,ಶ್ರೀ ದುರ್ಗಾ ಪರಮೆಶ್ವರೀ ಮಹಿಳಾ ವೇದಿಕೆ ಹಾಗೂ ಸಂಘಟನಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.