ಬ್ರಹ್ಮಾವರ : ಶ್ರೀದುರ್ಗಾ ಪರಮೇಶ್ವರೀ ದೇವಸ್ಥಾನ ಬಾಳ್ಕುದ್ರು ಹಂಗಾರಕಟ್ಟೆಯ ಗದ್ದುಗೆ ಅಮ್ಮ, ಪಂಜುರ್ಲಿ ಮತ್ತು ನಾಗ ದೇವರುಗಳ ಪ್ರತಿಷ್ಠಾ ವರ್ಧಂತ್ಯತ್ಸವ, ವಾರ್ಷಿಕ ಕೆಂಡ ಜಾತ್ರೆಯ ಶ್ರೀಮಠ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರ ಆಶೀರ್ವಾದ ದೊಂದಿಗೆ ವೇದ ಮೂರ್ತಿ ಸುಬ್ರಹ್ಮಣ್ಯ ಭಟ್ ಇವರ ನೇತೃತ್ವದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಶುಕ್ರವಾರ ಜರುಗಿತು. ಮಧ್ಯಾಹ್ನ ದೇವರಿಗೆ ಮಹಾ ಪೂಜೆಯ ಬಳಿಕ ಅನ್ನ ಸಂತರ್ಪಣೆ ಜರುಗಿತು.
ಆಡಳಿತ ಮಂಡಳಿಯ ಅಧ್ಯಕ್ಷ ಕೃಷ್ಣಪ್ಪ ಬೆನ್ನು , ಕಾರ್ಯದರ್ಶಿ ರಾಘವೇಂದ್ರ ದೇವಾಡಿಗ , ಅರ್ಚಕ ಸುಧಾಕರ ಪೂಜಾರಿ ಆಡಳಿತ ಮಂಡಳಿಯ ಸದಸ್ಯರು ಗುರಿಕಾರರು ನೇತೃತ್ವ ವಹಿಸಿದ್ದರು.