ಸಿನಿಮಾ

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರತಿಷ್ಠಿತ
ಭಾರತೀಯ ಸಿನಿಮಾ ಸ್ಪರ್ಧೆಗೆ ‘ಆ 90 ದಿನಗಳು’ ಸಿನಿಮಾ ಆಯ್ಕೆ

0

ವರದಿ : ಬಿ.ಎಸ್.ಆಚಾರ್ಯ

ಚಂದನವನ : 13 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರತಿಷ್ಠಿತ ಭಾರತೀಯ ಸಿನಿಮಾ ಸ್ಪರ್ಧೆಗೆ ” ಮಾಲ್ವಿಕ ಮೋಶನ್ ಪಿಚ್ಚರ್ಸ್ ” ನಿರ್ಮಾಣದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ” ಗುಲ್ವಾಡಿ ಟಾಕೀಸ್ ” ಅರ್ಪಿಸುವ ರೊನಾಲ್ಡ್ ಲೋಬೊ ಮತ್ತು ಯಾಕೂಬ್ ಖಾದರ್ ಗುಲ್ವಾಡಿ ನಿರ್ದೇಶನದ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥೆ ಹೊಂದಿರುವ ‘ಆ 90 ದಿನಗಳು’ ಸಿನಿಮಾ ಆಯ್ಕೆಯಾಗಿದೆ.

55 ರಾಷ್ಟ್ರಗಳ 200 ಚಿತ್ರಗಳ ಪ್ರದರ್ಶನ ಮತ್ತು ಸ್ಪರ್ಧೆ
ಮಾ. 3 ರಿಂದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದೆ.

Advertisement. Scroll to continue reading.

ಈ ಸಿನಿಮಾದಲ್ಲಿ ರತಿಕ್ ಮುರ್ಡೇಶ್ವರ್, ಭವ್ಯ ,ರಾಧ ಭಗವತಿ, ಕೃತಿಕ ದಯಾನಂದ್, ಜೋ ಸೈಮನ್ , ಪ್ರದೀಪ್ ಪೂಜಾರಿ , ಅಮೀರ್ ಹಂಝ, ಪಕೀರ್ ಸಲಾಂ, ರವಿ ಕಿರಣ್ ಮುರ್ಡೇಶ್ವರ ಮುಂತಾದವರು ಅಭಿನಯಿಸಿದ್ದಾರೆ.

ರವಿಕಿರಣ್

ಸಹ ನಿರ್ಮಾಪಕರು: ಗಿರೀಶ ಶೆಟ್ಟಿಗಾರ್, ನವೀನ ವಿಲಿಯಮ್ಸ್ ಬರ್ಬೋಜ,
ತಾಂತ್ರಿಕ ನಿರ್ದೇಶನ: ಬಿ.ಶಿವಾನಂದ, ಛಾಯಾಗ್ರಹಣ: ಪಿವಿಆರ್ ಸ್ವಾಮಿ ಗೂಗಾರ ದೊಡ್ಡಿ , ಸಂಗೀತ: ಕ್ರಷ್ಣ ಬಸ್ರೂರು , ಸಂಕಲನ: ನಾಗೇಶ ಎನ್., ಕಲರಸ್ಟ್: ಜೆ. ಗುರು ಪ್ರಸಾದ್, ಸೌಂಡ್ ಡಿಸೈನರ್: ಬಾಲಕೃಷ್ಣ, ಸಾಹಿತ್ಯ: ಪ್ರಮೋದ ಮರವಂತೆ, ಗಾಯಕರು: ಅರ್ಫಾಝ್ ಉಳ್ಳಾಲ್,
ಶಶಿಕಲ ಸುನೀಲ್ ಮುಂತಾದವರು ತಾಂತ್ರಿಕ ವರ್ಗದಲ್ಲಿದ್ದಾರೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com