ಸಿನಿಮಾ

ಚಂದನವನದ ಹಿರಿಯ ನಟ ರಾಜೇಶ್ ವಿಧಿವಶ

1

ಬೆಂಗಳೂರು: ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಇಂದು ಚಿಕಿತ್ಸೆ ಫಲಕಾರಿಯಾಗಲೇ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಫೆಬ್ರವರಿ 9 ರಂದು ಉಸಿರಾಟದ ಸಮಸ್ಯೆಯಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಹಿರಿಯ ನಟ ರಾಜೇಶ್ ಅವರು ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

ಏಪ್ರಿಲ್ 15, 1935ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಅವರು, ಡಾ. ರಾಜ್ ಕುಮಾರ್, ಉದಯ ಕುಮಾರ್, ಕಲ್ಯಾಣ ಕುಮಾರ್ ಅವರ ಸಮಕಾಲೀನರಾಗಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಹಬ್ಬಿದ್ದರು.

Advertisement. Scroll to continue reading.

ಸೊಸೆ ತಂದ ಸೌಭಾಗ್ಯ, ದೇವರ ಗುಡಿ, ವೀರ ಸಂಕಲ್ಪ ಸೇರಿದಂತೆ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಶ್ರೀನಿ ಅವರ ಓಲ್ಡ್ ಮಾಂಕ್ ಕೊನೆಯ ಚಿತ್ರವಾಗಿತ್ತು.

ನಟ ರಾಜೇಶ್ ಪುತ್ರಿ ನಟಿ ಆಶಾರಾಣಿ, ನಟ ಅರ್ಜುನ್ ಸರ್ಜಾ ಅವರನ್ನು ವರಿಸಿದ್ದಾರೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com