ಬಾರಕೂರು ಶ್ರೀಏಕನಾಥೇಶ್ವರಿ ದೇವಸ್ಥಾನದ ವರ್ಧಂತ್ಯುತ್ಸವ; ಸನ್ಮಾನ
Published
2
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಯಾವ ಊರು, ದೇಶದಲ್ಲಿ ಇದ್ದರೂ ಗ್ರಾಮ ದೇವರು ಮತ್ತು ಊರ ದೇವರ ಅನುಗ್ರಹ ಇದ್ದರೆ ಮಾತ್ರ ಯಶಸ್ಸು ಸಾದ್ಯ ಎಂದು ಅನಿವಾಸಿ ಉದ್ಯಮಿ ರಾಜ್ಯೋತ್ಸವ ಪ್ರಶಸ್ತೀ ಪುರಸ್ಕೃತ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದರು.
ಶನಿವಾರ ಬಾರಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ಚತುರ್ಥ ವಾರ್ಷಿಕ ವರ್ಧಂತ್ಯುತ್ಸವದ ಅಂಗವಾಗಿ ನೂಥನವಾಗಿ ಉದ್ಘಾಟನೆ ಗೊಂಡ ದೇವಾಡಿಗರ ಸಮುದಾಯ ಭವನದಲ್ಲಿ ಜರುಗಿದ ದೇವಾಡಿಗ ಸಮಾವೇಶದಲ್ಲಿ ಜರುಗಿದ ಸನ್ಮಾನ ಸ್ವೀಕರಿಸಿ ಮಾತನಾಡಿ ದೇವರ ಅನುಗ್ರಹ ಇದ್ದರೆ ಮಾತ್ರ ದೇವರ ಸೇವೆ ಜನರ ಸೇವೆ ಮಾಡಲು ಸಾಧ್ಯ ಎಂದರು.
ಗುರುವಾರದಿಂದ 3 ದಿನಗಳ ಕಾಲ ದೇವಸ್ಥಾನದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಶುಕ್ರವಾರ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ನಾನಾ ಭಾಗದ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ. ಶನಿವಾರ ವೇದಮೂರ್ತಿ ರಮೇಶ್ ಭಟ್ ನಾಯರ್ ಬೆಟ್ಟು ಇವರ ನೇತೃತ್ವದಲ್ಲಿ ಸಾಮೂಹಿಕ ಚಂಡಿಕಾಯಾಗ , ವಧು ವರರ ನೊಂದಣೆ ಮತ್ತು ವರಾನ್ವೇಷಣೆ ಜರುಗಿತು. ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗೋವಿಂದ ಬಾಬು ಪೂಜಾರಿ , ಅಕ್ಷತಾ ದೇವಾಡಿಗ , ಮಂಗಳಾ ಕಿಶೋರ್ ,ಉಮಾನಾಥ್ ದೇವಾಡಿಗ , ವಿಜಯ ಕೊಡವೂರು, ಕಾಪು ಪುರಸಭೆಗೆ ಚುನಾಯಿತರಾದ ಸುರೇಶ್ ದೇವಾಡಿಗ , ಹರಿಣಾಕ್ಷಿ ದೇವಾಡಿಗ , ಲತಾ ದೇವಾಡಿಗರನ್ನು ಸನ್ಮಾನಿಸಲಾಯಿತು.
ದೇವಸ್ಥಾನದ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್ ,ಮುಖ್ಯ ಸಂಚಾಲಕರಾದ ಎಚ್ ಮೋಹನ್ ದಾಸ್ , ಧರ್ಮಪಾಲ್ ದೇವಾಡಿಗ , ಜನಾರ್ಧನ ದೇವಾಡಿಗ ಬಾರಕೂರು , ನರಸಿಂಹ ದೇವಾಡಿಗ ಉಡುಪಿ , ತೋನ್ಸೆ ಜಯ ಶ್ರೀ ಕೃಷ್ಣ ಶೆಟ್ಟಿ , ಮತ್ತು ದೇವಸ್ಥಾನದ ವಿಶ್ವಸ್ಥರು ಆಡಳಿತ ಮಂಡಳಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ದೇವಸ್ಥಾನದ ವಿಶ್ವಸ್ಥರಾಗಿದ್ದು ಇತ್ತೀಚೆಗೆ ಮೃತರಾದ ಸುರೇಶ್ ದೇವಾಡಿಗ ಪಡುಕೋಣೆ ಯವರೀಗೆ ಶೃದ್ಧಾಂಜಲಿ ಸಲ್ಲಿಸಲಾಯಿತು . ಜನಾರ್ದನ ದೇವಾಡಿಗ ಪಡುಪಣಂಬೂರು ಕಾರ್ಯಕ್ರಮ ನಿರೂಪಿಸಿದರು.