ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಪುರಾತನ ಪ್ರಸಿದ್ಧ ಬಿಲ್ಲಾಡಿ ಗ್ರಾಮದ ಕದರಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಾಡಿನ ನಡುವೆ ಇದ್ದು ಪೂಜೆ ಪುನಸ್ಕಾರ ಇಲ್ಲದೆ 56 ವರ್ಷದಿಂದ ಕೇವಲ ಪಳೆಯುಳಿಕೆ ಮಾತ್ರ ಇದ್ದುದನ್ನ ಊರಿನ ಜನತೆ ಜಿಣೋದ್ಧಾರ ಮಾಡುವ ಸಂಕಲ್ಪಕ್ಕೆ ಮಂಗಳವಾರ ಪೇಜಾವರ ಮಠದ ವಿಶ್ವಪ್ರಸನ್ನ ಶ್ರೀಗಳಿಂದ ಭೂಮಿ ಪೂಜೆ ಜರುಗಿತು.
ಕಳೆದ ವರ್ಷ ಈ ದೇವಸ್ಥಾನದ ತೀರಾ ದುಸ್ಥಿಯ ಕುರಿತು ದಿಕ್ಸೂಚಿ ನ್ಯೂಸ್ ವಿಸ್ತೃತ ವರದಿ ಮಾಡಿ ಗಮನ ಸೆಳೆದಿತ್ತು. ಇಂದು ಕೃಷ್ಣ ಮೂರ್ತಿ ಉಡುಪ ಮತ್ತು ಅರ್ಚಕ ಪ್ರಭಾಕರ ಚಡಗ ಪೂಜಾ ಕಾರ್ಯ ನೆರವೇರಿಸಿದರು.
ಊರ ಮಹಿಳಾ ತಂಡವು ಶ್ರೀಗಳವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಗಳು ಮಾತನಾಡಿ, ಪುರಾತನ ದೇವಸ್ಥಾನಗಳ ಪುನರುಥ್ಥಾನ ಮಾಡಲು ಜನ್ಮಾಂತರ ಪುಣ್ಯ ಬೇಕು. ಹಲವಾರು ವರ್ಷದಿಂದ ದೇವಾಲಯದ ಅಸ್ತಿತ್ವ ಇಲ್ಲದ ಊರಿಗೆ ಹೊಸ ದೇವಾಲಯ ನಿರ್ಮಾಣ ಮಾಡಲು ನಿಮಗೆ ನಮಗೆ ಸಿಕ್ಕಿದ ಪುಣ್ಯ ಎಂದರು.
Advertisement. Scroll to continue reading.
ಜಿಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಶ್ರೀಗಳವರಿಗೆ ಫಲ ಸಮರ್ಪಣೆ ಮಾಡಿದರು.
ಮಂದಾರ್ತಿ ದೇವಸ್ಥಾನದ ಧರ್ಮದರ್ಶಿ ಧನಂಜಯ ಹೆಗಡೆ, ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನದ ಧರ್ಮದರ್ಶಿ ಆನಂದ ಸಿ ಕುಂದರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಟ್ಟಾರು ರತ್ನಾಕರ ಹೆಗಡೆ, ಕದರಂಜೆ ದೇವಸ್ಥಾನದ ಸಂಚಾಲಕರಾದ ಉಮೇಶ್ ಹೆಗಡೆ, ಕಾರ್ಯದರ್ಶಿ ಸುಜಿತ್ ಹೆಗಡೆ, ಸಮಿತಿಯ ಇನ್ನಿತರ ಸದಸ್ಯರಾದ ಭರತ್ ಕುಮಾರ್ ಶೆಟ್ಟಿ, ಕರುಣಾಕರ ಶೆಟ್ಟಿ ನೈಲಾಡಿ, ಭುಜಂಗ ಶೆಟ್ಟಿ ನೈಲಾಡಿ, ಬಿ.ಕೆ ಹೆಗ್ಡೆ, ಸುರೇಶ್ ಶೆಟ್ಟಿ ಬಿಲ್ಲಾಡಿ, ಮಹಿಳಾ ಸಂಘದ ಅಧ್ಯಕೆ ಗುಲಾಬಿ, ಗ್ರಾಮ ಪಂಚಾಯತಿಯ ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ, ರವಿ ಆಚಾರ್ಯ, ಶಕುಂತಲಾ, ಇನ್ನಿತರರು ಉಪಸ್ಥಿತರಿದ್ದರು.
ನೂರಾರು ಭಕ್ತರು ಆಗಮಿಸಿ ನವರತ್ನಗಳನ್ನು ಸಮರ್ಪಿಸಿದರು.