ಉಕ್ರೇನ್: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧಭೀತಿ ಹೆಚ್ಚಾಗಿದೆ. ರಷ್ಯಾ ನಡೆಸಿದಂತ ಶೆಲ್ ದಾಳಿಯಿಂದಾಗಿ 7 ಮಂದಿ ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿರೋದಾಗಿ ಉಕ್ರೇನ್ ಹೇಳಿದೆ.
ಈ ಬಗ್ಗೆ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಉಕ್ರೇನ್, ರಷ್ಯಾ ಪಡೆಗಳು ನಡೆಸಿದಂತ ಶೆಲ್ ದಾಳಿಯಲ್ಲಿ ಕನಿಷ್ಠ 7 ಉಕ್ರೇನ್ ಪ್ರಜೆಗಳು ಸಾವನ್ನಪ್ಪಿದ್ದಾರೆ. 9 ಮಂದಿ ಗಾಯಗೊಂಡಿರುವ ಬಗ್ಗೆ ತಿಳಿಸಿದೆ.
ನೋ ಫ್ಲೈಯಿಂಗ್ ಝೋನ್ ಘೋಷಣೆಯ ನಂತರವೂ ರಷ್ಯಾ ಯುದ್ಧ ವಿಮಾನಗಳು ಉಕ್ರೇನ್ ನಲ್ಲಿ ಹಾರಾಡಿದ್ದರಿಂದಾಗಿ ಪ್ರತಿ ದಾಳಿ ನಡೆಸಿರುವಂತ ಉಕ್ರೇನ್, 7 ರಷ್ಯಾ ವಿಮಾನ, 1 ಹೆಲಿಕ್ಯಾಪ್ಟರ್ ಹೊಡೆದುರುಳಿಸಿದೆ ಎಂದು ತಿಳಿದು ಬಂದಿದೆ.
Advertisement. Scroll to continue reading.