ಬ್ರಹ್ಮಾವರ : ಕಾಂಗ್ರೆಸ್ ಕೋಮುಭಾವನೆ ಕೆರಳಿಸುತ್ತಿದೆ : ಬಿಜೆಪಿ ಪ್ರತಿಭಟನೆ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಕಾಂಗ್ರೆಸ್ ಪಕ್ಷವು ಜನರ ತೆರಿಗೆ ಹಣದಲ್ಲಿ ನಡೆವ ವಿಧಾನಸಭಾ ಅಧಿವೇಶನವನ್ನು ಕ್ಲುಲ್ಲಕ ಕಾರಣಗಳಿಂದ ವ್ಯರ್ಥಗೊಳಿಸಿದೆ. ಶಿವಮೊಗ್ಗದಲ್ಲಿ ತ್ರಿವರ್ಣ ಧ್ವಜ ಕೆಳಗಿಳಿಸಿದ್ದಾರೆಂದು ಅಪಪ್ರಚಾರ ಮಾಡಿ, ಕೋಮುಭಾವನೆಗಳನ್ನು ಕೆರಳಿಸಿ ಅಮಾಯಕ ಹರ್ಷ ಅವರ ಹತ್ಯೆಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿ ಉಡುಪಿ ಗ್ರಾಮಾಂತರ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು.
ಶಿವಮೊಗ್ಗ ಘಟನೆಯನ್ನು ಖಂಡಿಸಿ ಜ್ಞಾನ ವಸಂತ ಶೆಟ್ಟಿ ಮಾತನಾಡಿ, ಬಹು ಸಂಖ್ಯಾತರು ಇರುವ ಹಿಂದುಸ್ಥಾನದಲ್ಲಿ ಅಲ್ಪ ಸಂಖ್ಯಾತರು ಎನಿಸಿದ ಮುಸ್ಲಿಂರು ಪೋಲಿಸರ ಎದುರು ತಲವಾರು ಜಳಪಿಸುತ್ತಾರೆ. ಅಂದರೆ ಇದು ಮುಸ್ಲಿಂ ರ ಪ್ರತ್ಯೇಕವಾದ ಆರಂಭವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಬಿರತಿ ರಾಜೇಶ ಶೆಟ್ಟಿ, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಭಾಗವಹಿಸಿದ್ದರು.