ಕಾಪು : ಸಮಾಜ ಸೇವಾ ವೇದಿಕೆ ಕಾಪು ಇದರ ವತಿಯಿಂದ ಮೆದುಳಿನ ಕಾಯಿಲೆಯಿಂದ ಬಳಲುತಿದ್ದ ಉಚ್ಚಿಲದ ನಿವಾಸಿಯೋರ್ವರ ಚಿಕಿತ್ಸೆಗಾಗಿ ರೂ 35 ಸಾವಿರ ನೆರವು ನೀಡಲಾಯಿತು.
ಚಿಕಿತ್ಸೆಗಾಗಿ ಈಗಾಗಲೇ ಲಕ್ಷಗಟ್ಟಲೆ ಹಣ ಖರ್ಚು ಮಾಡಿರುವ ಈ ಬಡ ಕುಟುಂಬ ಆರ್ಥಿಕವಾಗಿ ತುಂಬಾ ಕಷ್ಟದಲ್ಲಿದೆ. ಈ ಸಂದರ್ಭ ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷ ಮೊಹಮ್ಮದ್ ಫಾರೂಕ್ ಚಂದ್ರನಗರ ಇವರ ನೇತೃತ್ವದ ತಂಡ ರೋಗಿಯ ಮನೆಗೆ ಭೇಟಿ ನೀಡಿ ನೆರವು ನೀಡಿ ಸಹಕರಿಸಿದೆ.
ವೇದಿಕೆ ಗೌರವಾಧ್ಯಕ್ಷ ದಿವಾಕರ ಬಿ ಶೆಟ್ಟಿ ಕಳತ್ತೂರು, ಸಂಚಾಲಕ ದಿವಾಕರ ಡಿ ಶೆಟ್ಟಿ ಕಳತ್ತೂರು, ಗೌರವ ಸಲಹೆಗಾರ ದಯಾನಂದ ಕೆ ಶೆಟ್ಟಿ ದೆಂದೂರು, ಉಪಾಧ್ಯಕ್ಷ ಅಶೋಕ್ ಶೇರಿಗಾರ್ ಅಲೆವೂರು, ಸಂಯೋಜಕ ದಿನೇಶ್ ಮೂಲ್ಯ ಅಲೆವೂರು ಉಪಸ್ಥಿತರಿದ್ದರು.
Advertisement. Scroll to continue reading.