ವರದಿ : ಬಿ.ಎಸ್.ಆಚಾರ್ಯ
ಉಡುಪಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಜಿಲ್ಲಾ ಕೊರಗ ಸಂಘಟನೆ, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕೊರಗರ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಉತ್ಸವ ಅಜ್ಜರಕಾಡು ಕ್ರೀಡಾಂಗಣದಲ್ಲಿ ಜರುಗಿತು.
ಕೊರಗರು ಬುಟ್ಟಿ ನೇಯುವುದನ್ನ ಪ್ರಾತ್ಯಕ್ಷಿಕೆಗೆ ಸ್ವತಃ ಜಿಲ್ಲಾಧಿಕಾರಿ ಕೂರ್ಮ ರಾವ್ ಚಾಲನೆ ನೀಡಿದರು. ಸಂಜೆ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಉದ್ಘಾಟಿಸಿದರು.
Advertisement. Scroll to continue reading.
ಇದೇ ಸಂದರ್ಭದಲ್ಲಿ ಕೊರಗರು ತಯಾರಿಸಿದ ಬುಟ್ಟಿ, ಗೆರ್ಸಿ, ಹೆಡಿಗೆ, ಸಿಬ್ಬಲು ಇದಕ್ಕೆ ಸಂಜೀವಿನಿ ಮೂಲಕ ಉತ್ತಮ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಕ್ಯೂ – ಆರ್ ಕೋಡ್ ಮೂಲಕ ಉತ್ಪನ್ನ ತಯಾರಿಸುವ ಚಿತ್ರಣವನ್ನು ಅನಾವರಣ ಗೊಳಿಸಿದರು.
ಜಿಲ್ಲೆಯ ಸುಮಾರು 75 ಮಹಿಳಾ ಮತ್ತು ಪುರುಷರು ಬುಟ್ಟಿ ಇತರೆ ಉತ್ಪನ್ನಗಳನ್ನು ಸಿದ್ದಪಡಿಸಿದ್ದರು. ಕಾರ್ಯಕ್ರಮದ್ಲಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಯುವಜನ ಮತ್ತು ಕ್ರೀಡಾ ಅಧಿಕಾರಿ ರೋಷನ್ ಶೆಟ್ಟಿ, ಐ ಟಿ ಡಿ ಪಿ ಅಧಿಕಾರಿ ದೂದ್ ಪೀರ್ , ಕೊರಗ ಮುಖಂಡರಾದ ಬಾರಕೂರು ಗಣೇಶ್ ಕುಂಭಾಶಿ, ಗಣೇಶ್ ಕೊರಗ ಮತ್ತಿತರರು ಉಪಸ್ಥಿತರಿದ್ದರು.