ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಸ್ ನಿಲ್ದಾಣದಲ್ಲಿ ಕಳೆದ 28 ವರ್ಷದಿಂದ ಪಲ್ಸ್ ಪೋಲಿಯೋ ಲಸಿಕೆಯನ್ನು ಪ್ರಯಾಣಿಕರಿಗೆ ನೀಡುವ ಒಂದು ಸೇವಾ ಮನೋಭಾವವನ್ನು ಇಲ್ಲಿನ ವಾರಂಬಳ್ಳಿಯ ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷ ನವೀನ ಚಂದ್ರನಾಯಕ್ ಮಾಡುತ್ತಿರುವುದು ಮಾದರಿ ಕೆಲಸವಾಗಿದೆ.
ಇಲ್ಲಿನ ಚಿಕ್ಕ ಕ್ಯಾಂಟೀನ್ ಹೊಂದಿದ ನವೀನ ಚಂದ್ರರು ಬಸ್ ಪ್ರಯಾಣಿಕರಲ್ಲಿ ಚಿಕ್ಕ ಮಕ್ಕಳು ಪೋಲೀಯೋ ಲಸಿಕೆಯಿಂದ ದೂರವಾಗಬಾರದು ಎನ್ನುವ ಉದ್ದೇಶದಿಂದ ಇಲ್ಲಿ ಸಂಚರಿಸುವ ಬಸ್ ನಲ್ಲಿ ಇರುವ ಪ್ರಯಾಣಿಕರಲ್ಲಿ ಕಂಡು ಲಸಿಕೆ ಹಾಕುತ್ತಿದ್ದಾರೆ.
ಈ ವರ್ಷ ಕೂಡಾ ಇಂದು ಇಲ್ಲಿನ ಆರೋಗ್ಯ ಇಲಾಖೆಯ ರೋಹನ್ ಶೆಟ್ಟಿಗಾರ ಮತ್ತು ಆಶಾ ಕಾರ್ಯಕರ್ತೆ ಪ್ರೇಮಾರ ಮೂಲಕ ಮಧ್ಯಾಹ್ನದ ಒಳಗೆ 50 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಇದೊಂದು ಮಾದರಿ ಮತ್ತು ವಿನೂತನ ಕೆಲಸವಾಗಿದೆ.
Advertisement. Scroll to continue reading.