ಚೇರ್ಕಾಡಿ : ಪ್ರೇರಣ ಸಾಂಸ್ಕೃತಿಕ ಕಲಾ ಟ್ರಸ್ಟ್ ವಾರ್ಷಿಕೋತ್ಸವ
Published
1
ವರದಿ: ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಚೇರ್ಕಾಡಿ ಪ್ರೇರಣ ಸಾಂಸ್ಕೃತಿಕ ಕಲಾ ಟ್ರಸ್ಟ್ ಮೂಡುವಾರಣಾಸಿಯ ಐದನೇ ವರ್ಷದ ವಾರ್ಷಿಕೋತ್ಸವ ಸೋಮವಾರ ಜರುಗಿತು. ಬ್ರಹ್ಮಾವರ ತಾಲೂಕು ತಹಶೀಲ್ದಾರ್ ರಾಜಶೇಖರ ಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿ, ನಮ್ಮಲ್ಲಿ ಸಮೂಹ ನಾಯಕತ್ವದ ಕೊರತೆ ಇದೆ. ಅದು ಸಂಘ ಸಂಸ್ಥೆಯಾಗಿರಬಹುದು ಅಥವಾ ವ್ಯಕ್ತಿಯಲ್ಲಿ ಕೂಡಾ ಇರಬಹುದು ಸಾಮೂಹಿಕ ನಾಯಕತ್ವಕ್ಕೆ ಗ್ರಾಮೀಣ ಭಾಗದ ಇಂತಹ ಕಲಾ ಸಂಘಟನೆಯಿಂದ ಆರಂಭಗೊಂಡು ಊರಿಗೆ ದೇಶಕ್ಕೆ ಮಾದರಿಯಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ವಾಸ್ತು ಮತ್ತು ಜಲ ತಜ್ಞ ಡಾ.ಅನಂತ ನಾಯ್ಕ್ ಮತ್ತು ಬ್ರಹ್ಮಾವರದಿಂದ ಕಾಲು ನಡಿಗೆಯಿಂದ ಜಮ್ಮು ಕಾಶ್ಮಿರಕ್ಕೆ ಹೋಗಿ ಇಲ್ಲಿನ ಜನಪದ ಕಲೆ ಹುಲಿ ಕುಣಿತವನ್ನು ನೀಡಿದ ಹರ್ಷೆಂದ್ರ ಆಚಾರ್ಯರನ್ನು ಸನ್ಮಾನಿಸಲಾಯಿತು.
Advertisement. Scroll to continue reading.
ಸಂಸ್ಥೆಯ ಅಧ್ಯಕ್ಷ ಅರುಣ್ ಕುಮಾರ್ ನಾಯ್ಕ್ , ಚೇರ್ಕಾಡಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ , ಸದಸ್ಯ ಕಮಲಾಕ್ಷ ಹೆಬ್ಬಾರ, ಮಧುರ ನಾಯ್ಕ್ , ಗೋಪಿ ಕೆ ನಾಯ್ಕ್, ಡಾ.ರಾಮದಾಸ ಪ್ರಭು ಉಪಸ್ಥಿತರಿದ್ದರು.