ಬ್ರಹ್ಮಾವರ: ಶಿವರಾತ್ರಿ ಪ್ರಯುಕ್ತ ನಾಡಿನೆಲ್ಲೆಡೆಯ ಶಿವ ದೇವಾಲಯದಲ್ಲಿ ನಾನಾ ಪೂಜೆಗಳು ನಡೆಯುತ್ತಿದೆ. ಬಾರಕೂರು ಶ್ರೀ ಪಂಚಲಿಂಗೇಶ್ವರ, ಬ್ರಹ್ಮಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ , ಕೂರಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮಣೆಗಾರ ಕೇರಿ ಶ್ರೀ ಸೊಮನಾಥೇಶ್ವರ ದೇವಸ್ಥಾನ, ಮೂಡುಕೇರಿ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಭಜನೆ , ಪಾರಾಯಣ, ಸಿಯಾಳ, ಅಭಿಷೇಕ ಭಕ್ತರಿಂದ ನಡೆಯಿತು.
ಕಳೆದ 3 ವರ್ಷದಿಂದ ದೇವಸ್ಥಾನಗಳಲ್ಲಿ ಸಾಮೂಹಿಕ ಪೂಜೆ ಮತ್ತು ಭಕ್ತರು ನಿರಾಳವಾಗಿ ಹೋಗುವಂತಿಲ್ಲದ ಕಾರಣ ಕೋರೋನ ಸೊಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಎಲ್ಲ ದೇವಸ್ಥಾನದಲ್ಲಿ ಭಕ್ತರ ದಟ್ಟಣೆ ಹೆಚ್ಚಿಗೆ ಕಂಡು ಬಂತು.