ಉಡುಪಿ : ಬಸ್ – ಸ್ಕೂಟರ್ ನಡುವೆ ಅಪಘಾತ; ತಂದೆ – ಮಗಳು ಸಾವು
Published
1
ಉಡುಪಿ : ಬಸ್ – ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕರಾವಳಿ ಕಾವಲು ಪಡೆಯ ಎಎಸೈ ಹಾಗೂ ಅವರ ಪುತ್ರಿ ಮೃತಪಟ್ಟ ಘಟನೆ ಇಂದು ಮುಂಜಾನೆ ಸಂತೆಕಟ್ಟೆಯಲ್ಲಿ ನಡೆದಿದೆ.
ಗಣೇಶ್ ಪೈ(58) ಮತ್ತು ಮಗಳು ಗಾಯತ್ರಿ ಮೃತಪಟ್ಟವರು.
ಹುಬ್ಬಳ್ಳಿಯಿಂದ ಬಂದ ಮಗಳನ್ನು ಕರೆತರಲು ಗಣೇಶ್ ಬಸ್ ನಿಲ್ದಾಣಕ್ಕೆ ಬಂದಿದ್ದರು. ಆಕೆಯನ್ನು ಕರೆದುಕೊಂಡು ಸಂತೆಕಟ್ಟೆ ಜಂಕ್ಷನ್ ದಾಟುತ್ತಿದ್ದ ವೇಳೆ, ಕೇರಳದಿಂದ ಕೊಲ್ಲೂರು ಕಡೆಗೆ ಸಾಗುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಮಗಳು ಗಾಯತ್ರಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಣೇಶ್ ಆಸ್ಪತ್ರೆಗೆ ಸಾಗಿಸುತ್ತಿದ್ದ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.