ಉಪ್ಪೂರು : ತೆಂಕಬೆಟ್ಟು ಶ್ರೀಸಿದ್ಧಿ ವಿನಾಯಕ ದೇವಸ್ಥಾನ : ಜಾತ್ರಾ ಮಹಾರಥೋತ್ಸವ
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಮಹತೋಭಾರ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ತೆಂಕಬೆಟ್ಟು ಉಪ್ಪೂರು ಇಲ್ಲಿ ಜಾತ್ರಾ ಮಹಾ ರಥೋತ್ಸವದ ಅಂಗವಾಗಿ ಶನಿವಾರ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರುಗಿತು.
ಸಂಜೆ ಧರ್ಮ ಸಭೆಗೆ ಪುತ್ತಿಗೆ ಮಠದ ಶ್ರೀ ಸುಣೇಂದ್ರ ತೀರ್ಥಸ್ವಾಮೀಜಿಯವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ಭಟ್ ದಂಪತಿಗಳು ಪಾದ ಪೂಜೆ ಮಾಡಿ ಬರಮಾಡಿಕೊಂಡರು.
Advertisement. Scroll to continue reading.
ಬಳಿಕ ಜರುಗಿದ ಸಭಾ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ಅರ್ಚಕರಾಗಿ ಇನ್ನಿತರ ಕೆಲಸದಲ್ಲಿ ತೊಡಗಿಸಿಕೊಂಡವರನ್ನು ಸನ್ಮಾನಿಸಲಾಯಿತು.
ಬಳಿಕ ಶ್ರೀಗಳು ಮಾತನಾಡಿ, ದೇವಸ್ಥಾನಗಳು ಹಿಂದುಗಳ ಎಲ್ಲಾ ಜಾತಿಯವರ ಕೇಂದ್ರ ಸ್ಥಾನಗಳು. ಇಲ್ಲಿ ಎಲ್ಲಾ ವರ್ಗ ವೃತ್ತಿಯವರಿಗೂ ಉದ್ಯೋಗ ಆದಾಯದ ಮೂಲಗಳು ಇದೆ. ಇಲ್ಲಿ ಸೇವೆ ಸಲ್ಲಿಸಿದ ಎಲ್ಲರನ್ನು ಗೌರವಿಸುವ ಕೆಲಸ ಶ್ಲಾಘನೀಯ ಎಂದರು.
ಉಡುಪಿ ಶಾಸಕ ಕೆ ರಘುಪತಿ ಭಟ್ ದೇವಸ್ಥಾನಕ್ಕೆ ಭೇಟಿ ನೀಡಿದರು.
ಉಪ್ಪೂರೂ ಗ್ರಾಮ ಪಂಚಾಯತಿ ಅಧ್ಯಕ್ಷ ಕೃಷ್ಣ ರಾಜ್ ಕೋಟ್ಯಾನ್ , ಡಾ ಶಶಿಕಿರಣ್ ಶೆಟ್ಟಿ , ನಾಗೇಶ್ ಗಾಂವ್‍ಸ್ಕರ್ , ಸಂತೋಷ ಶೆಟ್ಟಿ ಇನ್ನಿತರು ಉಪಸ್ಥಿತರಿದ್ದರು. ಇದೇ ಸಂದರ್ಬದಲ್ಲಿ ದೇವಸ್ಥಾನದ ಭಕ್ತಿಗೀತೆಯ ದ್ವನಿ ಸುರುಳಿಯನ್ನು ಬಿಡುಗಡೆಗೊಳಿಸಲಾಯಿತು. ಶ್ರೀಮತಿ ಸ್ವಪ್ನ ರಾಜ್ ಮತ್ತು ಭಳಗದವರಿಂದ ಭಕ್ತೀಗೀತೆ ಕಾರ್ಯಕ್ರಮ ಜರುಗಿತು.