ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕರಾವಳಿಯ ರೈತರು 2ನೇ ತರಕಾರಿ ಬೆಳೆಯಾದ ಸೌತೆಯನ್ನು ಬೆಳೆದು ಬೆಲೆಯೆ ಇಲ್ಲದ ಕಾರಣ ಸೌತೆ ಬೆಳೆದ ರೈತರು ಗದ್ದೆಯಲ್ಲಿಯೇ ಬೆಳೆಯನ್ನು ಬಿಟ್ಟಿದ್ದಾರೆ.
ಬಾರಕೂರು ಭಾಗದಲ್ಲಿ ರೈತರು ಬೆಳೆದ ಹಲವಾರು ಹೆಕ್ಟೆರ್ ಸೌತೆ ಬೆಳೆಗಾರರು ತೀರಾ ಕಂಗಾಲಾಗಿದ್ದಾರೆ.
ಗದ್ದೆಯನ್ನು ಉಳುಮೆ ಮಾಡಿ ಹದಗೊಳಿಸಿ ಬಿತ್ತನೆ ಮಾಡಿ ನೀರು ಹಾಯಿಸಿ ಉತ್ತಮ ಫಸಲು ಬಂದ ಸೌತೆ ಮಾರುಕಟ್ಟೆಗೆ ಹೋಗುವ ಸಮಯದಲ್ಲಿ ಕೆಜಿಗೆ 3 ರೂ. ಗೆ ಮಾರುಕಟ್ಟೆಯಲ್ಲಿ ಬೆಳೆಗಾರರಿಂದ ಕೇಳುವ ಕಾರಣ ಗದ್ದೆಯಲ್ಲಿ ಇದ್ದ ಬೆಳೆಯನ್ನು ಕಟಾವು ಮಾಡಿ ಸಾಗಾಟದ ಮೂಲಕ ಮಾರುಕಟ್ಟೆಗೆ ಹೋಗುವ ಹಣ ಕೂಡಾ ಸಿಗದ ಕಾರಣ ಗದ್ದೆಯಲ್ಲಿಯೆ ಬಿಟ್ಟಿದ್ದಾರೆ.
ಹಿಂದೆ ಬೆಳೆಯುವ ಸೌತೆಕಾಯಿಯನ್ನು ವರ್ಷ ಗಟ್ಟಲೆ ಮನೆಯಲ್ಲಿ ಜೋತು ಹಾಕುತ್ತಿದ್ದರೂ ಹಾಳಾಗದೆ ಈಗ ಬೆಳೆಯುವ ಸೌತೆ ಕಟಾವು ಮಾಡಿ ಕೆಲವೇ ದಿನದಲ್ಲಿ ಮಾರಾಟವಾಗದಿದ್ದಲ್ಲಿ ಕೊಳೆಯುವ ಸಂಭವ ಇರುವುದರಿಂದ ರೈತರು ಬೆಳೆಸಲು ಹಾಕಿದ ಹಣ ಸಿಗದೆ ಆರ್ಥಿಕವಾಗಿ ತತ್ತರಿಸುವಂತೆ ಆಗಿದೆ.
Advertisement. Scroll to continue reading.
ಇನ್ನೊಂದೆಡೆಯಲ್ಲಿ ಹಾಸನ, ಚಿಕ್ಕಮಗಳೂರು ಸೇರಿದಂತೆ ಘಟ್ಟದಿಂದ ಬರುವ ಸೌತೆಯಿಂದ ಇಲ್ಲಿನ ಬೆಳೆಗೆ ಬೆಲೆ ಇಲ್ಲದಂತಾಗಿದೆ. ಈ ತಿಂಗಳು ನಾಗಮಂಡಲ ಮದುವೆ ಇನ್ನಿತರ ಶುಭಕಾರ್ಯಗಳು ಕಡಿಮೆ ಇದ್ದ ಕಾರಣ ಬೇಡಿಕೆ ಇಳಿಕೆಯಾಗಲು ಕಾರಣವಾಗಿದೆ.
ರೈತರು ಮಾತ್ರ ಬೆಳೆಯುವ ಬೆಳೆಗೆ ಯಾವಾಗಲೂ ಮಾರುಕಟ್ಟೆಗೆ ಬರುವಾಗ ಬೆಲೆ ಇಲ್ಲದಂತಾಗುತ್ತಿರುವುದಕ್ಕೆ, ರೈತರು ಬೆಳೆದ ಯಾವುದೇ ಬೆಳೆಗೆ ಸರಕಾರದ ಬೆಂಬಲ ಬೆಲೆ ನೀಡುವಂತಾಗಬೇಕು ಅಥವಾ ಖರೀದಿಸುವಂತಾಗಬೇಕು ಎನ್ನುವುದು ರೈತರ ಬಯಕೆಯಾಗಿದೆ.ಲಕ್ಷ್ಮಣ ನಾಯ್ಕ್, ರೈತ