ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ರಾಷ್ಟ್ರೀಯ ಹೆದ್ದಾರಿ 66 ಬಳಿಯಲ್ಲಿರುವ ಕ್ಷೇಮ ಧಾಮ ಆಯುರ್ವೇದ ಆಸ್ಪತ್ರೆ ಬ್ರಹ್ಮಾವರ ಇದರ 4 ನೇ ವರ್ಷದ ಆಚರಣೆ ಅಂಗವಾಗಿ ಉಚಿತ ಆರೋಗ್ಯ ಶಿಬಿರ ಮಂಗಳವಾರ ಜರುಗಿತು.
ಬೆಳಿಗ್ಗೆಯಿಂದ ಸಂಜೆ ತನಕ ನಡೆದ ಶಿಬಿರದಲ್ಲಿ ದೀರ್ಘ ಕಾಲದ ಅನೇಕ ಖಾಯಿಲೆಗಳಿಗೆ ಡಾ.ವಿನಯಚಂದ್ರ ಶೆಟ್ಟಿ ಮತ್ತು ಅವರ ವೈದ್ಯಕೀಯ ತಂಡದಿಂದ ತಪಾಸಣೆ ಮಾಡಿ ಚಿಕಿತ್ಸೆಯನ್ನು ನೀಡಿದರು.
Advertisement. Scroll to continue reading.
ನಾನಾ ಭಾಗದಿಂದ ಹಲವಾರು ಮಂದಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು.
ಯೋಗ ಮತ್ತು ಪಂಚಕರ್ಮ ಚಿಕಿತ್ಸೆಯಿಂದ ಅನೇಕ ರೀತಿಯ ಖಾಯಿಲೆಯನ್ನು ಹತೋಟಿಗೆ ತರಬಹುದು. ಕ್ಷೇಮ ಧಾಮದಿಂದ ಪ್ರತೀ ವರ್ಷ ಒಂದು ದಿನ ಉಚಿತವಾಗಿ ಆರೋಗ್ಯ ಸೇವೆ ನೀಡುವುದನ್ನು ಮುಂದಿನ ದಿನದಲ್ಲಿ ಕೂಡಾ ಇರುತ್ತದೆ.ಡಾ. ವಿನಯಚಂದ್ರ ಶೆಟ್ಟಿ, ಮುಖ್ಯಸ್ಥರು ಕ್ಷೇಮ ಧಾಮ ಆಯುರ್ವೇದ ಆಸ್ಪತ್ರೆ, ಬ್ರಹ್ಮಾವರ