ಬಾರಕೂರು : ಕಚ್ಚೂರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಭಜನಾ ಮಂಗಲೋತ್ಸವ
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ಕಚ್ಚೂರು ಶ್ರೀ ದುರ್ಗಾಪರೇಶ್ವರೀ ದೇವಸ್ಥಾನದಲ್ಲಿ ನಗರ ಭಜನೆಯೊಂದಿಗೆ ವಾರ್ಷಿಕ ಭಜನಾ ಮಂಗಲೋತ್ಸವ ಮಂಗಳವಾರ ಜರುಗಿತು.
ಕೋಟ ಕೃಷ್ಣ ಸೋಮಯಾಜಿ ಅವರ ತಂಡದವರಿಂದ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಅದಿವಾಸ ಹೋಮ, ಕಲಾ ಹೋಮ, ದುರ್ಗಾ ಹೋಮ ಮತ್ತು ಬ್ರಹ್ಮಕಲಶೋತ್ಸವ ಬಳಿಕ ಅನ್ನ ಸಂತರ್ಪಣೆ ರಾತ್ರಿ ರಂಗಪೂಜೆ ಜರುಗಿತು.
ದೇವಸ್ಥಾನದ ಸಮಿತಿಯ ಮಧುಸೂಧನ ದಂಪತಿಗಳು ಸಂಕಲ್ಪ ಪೂಜೆಯಲ್ಲಿ ಭಾಗವಹಿಸಿದ್ದರು. ನಾನಾ ಭಾಗದ ಭಕ್ತರು ಭಾಗವಹಿಸಿದರು.