ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ಮೂಡುಕೇರಿ ಶ್ರೀ ವೇಣುಗೋಪಾಲ ಕೃಷ್ಣ ದೇವಸ್ಥಾನದಲ್ಲಿ ರವಿಶಂಕರ ಗೂರೂಜಿಯವರ ಶಿಷ್ಯ ಸುನೀಲ್ ಚಂದ್ರ ಹಾರ್ವೆ ಇವರಿಂದ 3 ದಿನಗಳ ಕಾಲ ಯೋಗ ಮತ್ತು ಪ್ರಾಣಾಯಾಮ, ಸಂತ್ಸಂಗ ಮತ್ತು ಭಜನಾ ಕಾರ್ಯಕ್ರಮ ಜರುಗಿತು.
ಇದರ ಅಂಗವಾಗಿ ಗುರುವಾರ ಸಂಜೆ ದೇವಸ್ಥಾನದ ಆವರಣದಲ್ಲಿ ಹಲವಾರು ಭಕ್ತರು ಸಹಸ್ರ ಹಣತೆಗಳ ದೀಪಗಳನ್ನು ಬೆಳಗಿಸಲಾಯಿತು. ಬಳಿಕ ದೇವರಿಗೆ ವಿಶೇಷ ಪೂಜೆ ಜರುಗಿತು.
ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ವಾಸುದೇವ ಬೈಕಾಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಅಚ್ಲಾಡಿ, ಉಪಾಧ್ಯಕ್ಷ ಸೂರ್ಯನಾರಾಯಣ ಗಾಣಿಗ, ಮಹಿಳಾ ಸಂಘದ ಜಯಂತಿ ವಾಸುದೇವ, ಯುವಕ ಸಂಘದ ಅಧ್ಯಕ್ಷ ಸುರೇಶ್ ಗಾಣಿಗ, ಗೌರವಾಧ್ಯಕ್ಷ ರಾಮಕೃಷ್ಣ ಹಾರಾಡಿ, ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಗಾಣಿಗ, ಗಣೇಶ್ ಗಾಣಿಗ ಬಾರ್ಕೂರು ಇನ್ನಿತರರು ಭಾಗವಹಿಸಿದ್ದರು.
Advertisement. Scroll to continue reading.