ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ರಾಜ್ಯ ಸರ್ಕಾರದ ಕಂದಾಯ ಇಲಾಖೆಯವತಿಯಿಂದ ಮಾರ್ಚ್ 12ರಂದು ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆ ಕಾರ್ಯಕ್ರಮ ಬ್ರಹ್ಮಾವರ ತಾಲ್ಲೂಕಿನ ಚೇರ್ಕಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಾರು ಕೋಡಿಯ ಲಕ್ಷ್ಮೀ ಬಾಯಿ ಯವರ ಮನೆಯ ವಠಾರದಲ್ಲಿ ಜರುಗಿತು.
ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರಮೂರ್ತಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರಿಗೆ ಮೂಲ ದಾಖಲೆಗಳಾದ ಪಹಣಿ, ಅಟ್ಲಾಸ್, ಆದಾಯ ಮತ್ತು ಜಾತಿಪ್ರಮಾಣಪತ್ರಗಳನ್ನು ತಲುಪಿಸುವ ಈ ಕಾರ್ಯ ಇಲಾಖೆಯ ಮಹತ್ವದ ಕೆಲಸವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಅಲ್ಲಿನ ಹಲವಾರು ರೈತ ಕುಟುಂಬದವರ ಮನೆಗಳಿಗೆ ತೆರಳಿ ದಾಖಲೆಗಳನ್ನು ನೀಡಲಾಯಿತು.
Advertisement. Scroll to continue reading.
ಚೇರ್ಕಾಡಿ ಗ್ರಾಮ ಪಂಚಾಯತಿ ಅಧ್ಯಕೆ ರೇಖಾ ಭಟ್, ಕಂದಾಯ ಇಲಾಖೆಯ ಲಕ್ಷ್ಮೀನಾರಾಯಣ ಭಟ್, ರಾಘವೇಂದ್ರ, ಗ್ರಾಮ ಲೆಕ್ಕಿಗ ಶಿವರಾಜ್ ಕಟ್ಟಗಿ, ಸಹಾಯಕ ಮಂಜುನಾಥ್ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ಸದಸ್ಯರಾದ ಕಿಟ್ಟಪ್ಪ ಅಮೀನ್, ಸುಜಾತಾ, ನಾರಾಯಣ ನಾಯ್ಕ್ ಇನ್ನಿತರು ಉಪಸ್ಥಿತರಿದ್ದರು.
ಇಂದು ಬ್ರಹ್ಮಾವರ ತಾಲೂಕಿನ ಬ್ರಹ್ಮಾವರ ಮತ್ತು ಕೋಟ ಹೋಬಳಿಯಲ್ಲಿ ಒಟ್ಟು 29 ಕಂದಾಯ ವೃತ್ತಗಳಿದ್ದು, 46,283 ಫಲಾನುಭವಿಗಳಿಗೆ ಗ್ರಾಮಮಟ್ಟದಲ್ಲಿ ದಾಖಲೆಗಳನ್ನು ನೀಡಲಾಗುತ್ತಿದೆ.