ಬೆಂಗಳೂರು : ಬೆಂಗಳೂರಿನಲ್ಲಿ ತಡರಾತ್ರಿ ಘೋರ ದುರಂತವೊಂದು ನಡೆದಿದೆ. ನಡುರಸ್ತೆಯಲ್ಲಿ ಕಾರೊಂದು ಹೊತ್ತಿ ಉರಿದ ಪರಿಣಾಮ ವ್ಯಕ್ತಿಯೊಬ್ಬರು ಸಜೀವ ದಹನವಾಗಿರುವ ಘಟನೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ನಡೆದಿದೆ.
ಬೆಂಗಳೂರಿನ ನೈಸ್ ರಸ್ತೆಯ ಚನ್ನಸಂದ್ರದ ಬಳಿ ನಡು ರಸ್ತೆಯಲ್ಲಿಯೇ ಕಾರೊಂದು ಹೊತ್ತಿ ಉರಿದಿದೆ. ಪರಿಣಾಮ ಕಾರಿನಲ್ಲಿದ್ದ ಕೋಲಾರ ಮೂಲದ ದರ್ಶನ್(40) ಸಜೀವ ದಹನವಾಗಿದ್ದಾರೆ.
ಉತ್ತರಹಳ್ಳಿಯಲ್ಲಿ ವಾಸವಾಗಿರುವ ಮೃತ ದರ್ಶನ್ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ತಮಕೂರು ರಸ್ತೆ ಬಳಿ ಸಂಬಂಧಿಕರೊಬ್ಬರ ಫಂಕ್ಷನ್‍ಗೆ ಹೋಗಿ ಬರುವುದಾಗಿ ಹೇಳಿ ಸಂಜೆ ಮನೆಯಿಂದ ತೆರಳಿದ್ದರು ಎನ್ನಲಾಗಿದೆ. ರಾತ್ರಿ 9.50ರ ಸುಮಾರಿಗೆ ದರ್ಶನ್ ಇದ್ದ ಕಾರ್ ಟೋಲ್ ನಿಂದ ಪಾಸ್ ಆಗಿರುವುದು ಕಂಡುಬಂದಿದೆ. ಆ ಬಳಿಕ ಕಾರ್ ಚನ್ನಸಂದ್ರ ಬ್ರಿಡ್ಜ್ ಬಳಿ ಬರುತ್ತಿದ್ದಂತೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ರಸ್ತೆಯ ಎಡ ಬದಿಗೆ ಕಾರ್ ಪಾರ್ಕ್ ಆಗಿದ್ದು, ಸಂಪೂರ್ಣ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಕಾರು ಮತ್ತು ಮೃತದೇಹ ಪತ್ತೆಯಾಗಿದೆ.
Advertisement. Scroll to continue reading.
ಇನ್ನು ಕಾರು ಹೊತ್ತಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯರು ಕೂಡಲೇ ನೈಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ನೈಸ್ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಆರ್. ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ.
Advertisement. Scroll to continue reading.