ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಗೋಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆಹಚ್ಚುವ ಬಗ್ಗೆ ಬ್ರಹ್ಮಾವರ ವೃತ್ತನೀರಿಕ್ಷಕ ಅನಂತ ಪದ್ಮನಾಭ, ಬ್ರಹ್ಮಾವರ ಠಾಣಾ ಪಿಎಸ್‌ಐ ಗುರುನಾಥ ಹಾದಿಮನಿ ಹಾಗೂ ಕೋಟ ಪಿಎಸ್‌ಐ ಮಧು ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತಂಡಗಳನ್ನು ರಚಿಸಿದ್ದು, ಈ ತಂಡಗಳು ಎಂದಿನಂತೆ ವಿಶೇಷ ಗಸ್ತಿನಲ್ಲಿರುವಾಗಬೆಳಿಗ್ಗಿನ ಜಾವ ಒಂದು ಬಿಳಿ ಬಣ್ಣದ ಸ್ಕೂಟಿಯಲ್ಲಿ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಬಾರ್ಕೂರು ರಸ್ತೆಯಿಂದ ಪ್ರಣವ್ ಆಸ್ಪತ್ರೆಗೆ ಹೋಗುವ ಒಳ ರಸ್ತೆಗೆ ಹೋಗಲು ಅನುಮಾನಸ್ಪದವಾಗಿ ನಿಂತಿದ್ದನ್ನು ಗಮನಿಸಿದ್ದಾರೆ.
ಒಂದು ಸ್ಕೂಟಿ ಹಾಗೂ ಒಳ ರಸ್ತೆಯಲ್ಲಿದ್ದ ಕಾರನ್ನು ಪರಿಶೀಲಿಸಲಾಗಿ 4 ಜನ ಆರೋಪಿತರು ತಲವಾರ್ ನೊಂದಿಗೆ ಸೀಟ್ ಇಲ್ಲದ ಕಾರಿನಲ್ಲಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದಾಗ ದನ ಕಳ್ಳತನಕ್ಕೆ ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಆರೋಪಿಗಳು ಕೃತ್ಯ ನಡೆಸಲು ಉಪಯೋಗಿಸಿದ ಬಿಳಿ ಬಣ್ಣದ ಸ್ಕೂಟಿ, ಬಿಳಿ ಬಣ್ಣದ ಸ್ವಿಫ್ಟ್ ಕಾರು, 4 ತಲವಾರು, 2 ಹಗ್ಗಗಳು, ನೀಲಿ ಬಣ್ಣದ ಟರ್ಪಾಲ್‌ನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಅಂದಾಜು ಮೌಲ್ಯ ಸುಮಾರು 3,20,000/ ಆಗಿದೆ.
ಆರೋಪಿಗಳು ‘ಟೀಂ ಗರುಡಾ’ ಎಂಬ ಇನ್ಸ್ಟಾಗ್ರಾಂ ಖಾತೆಯನ್ನು ತೆಗೆದುಕೊಂಡಿದ್ದು, ಪರಸ್ಪರ ಸಂಪರ್ಕಕ್ಕಾಗಿ ಇದೇ ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದುದಾಗಿ ತನಿಖೆಯಿಂದ ಕಂಡು ಬಂದಿರುತ್ತದೆ.
ಆರೋಪಿಗಳು ಬ್ರಹ್ಮಾವರ ಪೊಲೀಸ್ ಠಾಣೆಯ ದನ ಕಳವು ಪ್ರಕರಣ, ಕೋಟಾ ಪೊಲೀಸ್ ಠಾಣೆಯ ಜೀವ ಬೆದರಿಕೆ ಪ್ರಕರಣ, ಬೈಂದೂರು ಠಾಣೆಯ ಬ್ಯಾಟರಿ ಕಳವು ಪ್ರಕರಣ ದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
Advertisement. Scroll to continue reading.
ಬ್ರಹ್ಮಾವರ ಪೊಲೀಸ್ ಠಾಣಾ ಮೇಲಿನ ಪ್ರಕರಣದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ ಐಪಿಎಸ್, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ಕೆ.ಎಸ್.ಪಿ.ಎಸ್ ರವರ ಮಾರ್ಗದರ್ಶನದಂತೆ ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯ್ಕ, ಹಾಗೂ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಅವರ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ಗುರುನಾಥ ಬಿ ಹಾದಿಮನಿ ಹಾಗೂ ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಧು ಅವರೊಂದಿಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ ಪ್ರವೀಣ್ ಶೆಟ್ಟಿಗಾರ್, ಹೆಚ್.ಸಿ ರಾಘವೇಂದ್ರ, ಹೆಚ್.ಸಿ ಸಂತೋಷ ಶೆಟ್ಟಿ, ಹೆಚ್.ಸಿ ಉದಯ ಅಮೀನ್, ಪಿ.ಸಿ ದಿಲೀಪ್, ಪಿ.ಸಿ ಅಜ್ಮಲ್, ಪಿ.ಸಿ ಬಶೀರ್ ಹಾಗೂ ಕೋಟ ಠಾಣೆಯ ಪಿ.ಸಿ ಪ್ರಸನ್ನ, ಪಿ.ಸಿ ರಾಘವೇಂದ್ರ ಚಾಲಕ ಅಣ್ಣಪ್ಪ ಮತ್ತು ಮಂಜುನಾಥ ಭಾಗವಹಿಸಿದ್ದರು.
0 ಬ್ರಹ್ಮಾವರ : ರುಡ್ ಸೆಟ್ ಬ್ರಹ್ಮಾವರ ಮತ್ತು ಸ್ಮಾರ್ಟ್ ಕ್ರೀಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು. ಆವರ್ಸೆ...