ಬಾರಕೂರು ಶೆಡಿಗುಡ್ಡೆ ಶ್ರೀಮಹಿಷಂತಾಯ ಮತ್ತು ಪರಿವಾರ ದೇವಸ್ಥಾನದಲ್ಲಿ ಶೆಡಿ ಉತ್ಸವ
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ಶೆಡಿಗುಡ್ಡೆ ಶ್ರೀ ಮಹಿಷಂತಾಯ ಮತ್ತು ಪರಿವಾರ ದೇವಸ್ಥಾನದ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಗೆಂಡ ಸೇವೆ ಶೆಡಿ ಉತ್ಸವ ಮಂಗಳವಾರ ಜರುಗಿತು. ಅತೀ ಜಿರ್ಣಾವಸ್ಥೆಯಲ್ಲಿರುವ ಪ್ರಾಚೀನವಾದ ಈ ದೇವಸ್ಥಾನದದಲ್ಲಿ ಶೆಡಿ ಉತ್ಸವ ಎನ್ನುವುದು ಒಂದು ವಿಶೇಷ.
ನಾನಾ ಕಾರಣಕ್ಕೆ ಶೆಡಿ ಸೇವೆಯನ್ನು ಭಕ್ತಾಧಿಗಳು ಹರಕೆಯಾಗಿ ಹೇಳಿಕೊಂಡು ಬಯಕೆ ಈಡೇರಿದಾಗ ಶೆಡಿ ಸೇವೆ ಸಲ್ಲಿಸುತ್ತಾರೆ.
ಉತ್ಸವದಂದು ದೇವರ ಆವೇಶ ಹೊಂದಿದ ಪಾತ್ರಿಗಳು ಪ್ರಸಾದ ನೀಡಿದ ಬಳಿಕ ಶೆಡಿ ಸೇವೆ ಆರಂಭವಾಗುತ್ತದೆ.
ದೇವಸ್ಥಾನದ ಎದುರು ಭಾಗದಲ್ಲಿರುವ ಸಿಡಿ ಮರದ ಕಂಭದಲ್ಲಿ ಒಂದು ತೊಟ್ಟಿಲಲ್ಲಿ ಸೇವಾ ಕರ್ತರು ಕುಳಿತುಕೊಂಡು 25 ಅಡಿ ಎತ್ತರದಲ್ಲಿ ಕೊಂಡು ಹೋಗಿ 3 ಸುತ್ತು ತಿರುಗಿಸುತ್ತಾರೆ. ಸೇವಾಕರ್ತರು ಕೊಂಡು ಹೋದ ಬಾಳೆ ಗೊನೆಯ ಹಣ್ಣನ್ನು ಪ್ರಸಾದ ರೂಪವಾಗಿ ನೀಡುತ್ತಾರೆ. ಇಲ್ಲಿನ ದೇವಸ್ಥಾನದ ಉತ್ಸವ ಸೇವೆಗಳು ಸ್ಥಳೀಯ ಭಕ್ತರು ಮತ್ತು ದಾನಿಗಳಿಂದಲೇ ನಡೆಯಬೇಕಾಗಿದ್ದು, ಪ್ರಾಚೀನ ದೇವಸ್ಥಾನದ ಆಚರಣೆ ನಂಬಿಕೆಗಳಿಗೆ ಭಕ್ತಾಧಿಗಳ ನೆರವು ಮುಖ್ಯವಾಗಿದೆ.