ಕಾಪು : ಹಿಜಾಬ್ ವಿಚಾರವಾಗಿ ಹೈಕೋರ್ಟ್ ನೀಡಿರುವ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿ ಮುಸ್ಲಿಂ ಸಂಘಟನೆಗಳು ನೀಡಿರುವ ಬಂದ್ ಕರೆಗೆ ಕಾಪು ತಾಲೂಕಿನ ಹಲವೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಮೀರ್ ಎ ಶರೀಯತ್ ನ ಮೌಲಾನಾ ಸಗೀರ್ ಅಹಮದ್ ಹಾಗೂ ಹಲವಾರು ಮುಸ್ಲಿಂ ಸಂಘಟನೆಗಳು,ಮುಸ್ಲಿಂ ಮುಖಂಡರು ನೀಡಿರುವ ಕರ್ನಾಟಕ ಬಂದ್ ಗೆ ಕರೆಗೆ ಬೆಂಬಲ ಸೂಚಿಸಿದ ಮುಸಲ್ಮಾನ ಬಾಂಧವರು ಗುರುವಾರ ಬೆಳಗ್ಗಿನಿಂದಲೇ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದಾರೆ.
ಪಡುಬಿದ್ರಿ,ಕಾಪು,ಉಚ್ಚಿಲ, ಬೆಳಪು ಸೇರಿದಂತೆ ಕಾಪು ತಾಲೂಕಿನ ಹಲವೆಡೆ ಸಣ್ಣಪುಟ್ಟ ವ್ಯಾಪಾರಸ್ಥರಿಂದ ಹಿಡಿದು ಮುಸ್ಲಿಂ ಮಾಲಕತ್ವದ ದೊಡ್ಡ ದೊಡ್ಡ ಹೊಟೇಲ್ಗಳು, ಮಳಿಗೆಗಳು ಕಚೇರಿಗಳನ್ನು ಮುಚ್ಚಲಾಗಿದೆ.ಹೆಚ್ಚಿನ ಮುಸ್ಲಿಂ ಮಹಿಳೆಯರು ದಿನ ಬಳಕೆ ಸಾಮಾಗ್ರಿಗಳ ಖರೀದಿಗೆ ಪೇಟೆಗೆ ಬಾರದೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಟೆಂಪೋ, ರಿಕ್ಷಾ ಚಾಲಕರು ರಸ್ತೆಗಿಳಿಯದೆ ಬಂದ್ ಕರೆಗೆ ಸಾಥ್ ನೀಡಿದ್ದಾರೆ.