ಸಚಿವೆ ಶೋಭಾ ಕರಂದ್ಲಾಜೆ ಸೂಚನೆ; ಕುಂದಾಪುರಕ್ಕೆ ಹೆದ್ದಾರಿ ಯೋಜನಾ ನಿರ್ದೇಶಕ ಭೇಟಿ
Published
2
ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ:ರಾಷ್ಟ್ರೀಯ ಹೆದ್ದಾರಿಯಿಂದ ಕುಂದಾಪುರ ನಗರಕ್ಕೆ ಪ್ರವೇಶ ನೀಡಬೇಕು ಎನ್ನುವ ಸಾರ್ವಜನಿಕ ಒತ್ತಾಯದ ಮೇರೆಗೆ,ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೂಚನೆಯಂತೆ ಸಂಬಂಧಿಸಿದ ಸ್ಥಳಕ್ಕೆ ಯೋಜನಾ ನಿರ್ದೇಶಕ ಲಿಂಗೇಗೌಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಕುಂದಾಪುರ ಬೊಬ್ಬರ್ಯನ ಕಟ್ಟೆ ಸಮೀಪದ ಮೆಸ್ಕಾಂ ಕಛೇರಿ ಮುಂಬಾಗ ನಗರಕ್ಕೆ ಪ್ರವೇಶ ನೀಡುವ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಮೂರು ತಿಂಗಳ ಒಳಗೆ ಕಾರ್ಯಗತಗೊಳಿಸಲಿದೆ. ಮಾರ್ಚ್.30ರ ಒಳಗೆ ಮೇಲ್ಸೇತುವೆಗೆ ದಾರಿದೀಪಗಳ ಅಳವಡಿಸಲಾಗುವುದು ಎಂದರು.
ಈ ಸಂದರ್ಭ ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ , ಉಪಾಧ್ಯಕ್ಷ ಸಂದೀಪ್ ಖಾರ್ವಿ, ಬಿಜೆಪಿ ಮಂಡಳ ಅಧ್ಯಕ್ಷ ಶಂಕರ ಅಂಕದಕಟ್ಟೆ, ಬಿ.ಕಿಶೋರ್ ಕುಮಾರ್, ಅವಿನಾಶ್ ಉಳ್ತೂರು, ರಾಘವೇಂದ್ರ ಶೇಟ್, ಸತೀಶ್ ಪೂಜಾರಿ, ನಾಗರಾಜ್ ಆಚಾರ್ಯ, ಸುರೇಂದ್ರ ಕಾಂಚನ್, ಅಭಿಷೇಕ್ ಅಂಕದಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.