ಬಳ್ಳಾರಿ : ಆಕ್ಸಿಜನ್ ಪ್ಲಾಂಟ್ ನಲ್ಲಿ ರಾತ್ರಿ ಭೀಕರ ಸ್ಪೋಟ ಸಂಭವಿಸಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಳ್ಳಾರಿ ತಾಲೂಕಿನ ಕುಡತಿನಿ ಬಳಿಯ ಬಳ್ಳಾರಿ ಥರ್ಮಲ್ ಪವರ್ ಸ್ಟೇಷನ್ ನಲ್ಲಿ ನಡೆದಿದೆ.
ಕೇವಲ ಪ್ರಾಯೋಗಿಕ ಹಂತದಲ್ಲೇ ಆಕ್ಸಿಜನ್ ಪ್ಲಾಂಟ್ ಘಟಕದಲ್ಲಿ ಎಲೆಕ್ಟ್ರಿಕಲ್ ಪ್ಯಾನಲ್ ನಿನ್ನೆ ರಾತ್ರಿ ಸ್ಪೋಟಗೊಂಡಿದೆ. ಇದರಿಂದ ಆಕ್ಸಿಜನ್ ಪೈಪ್ ಲೈನ್ ಗಳು ಸಹ ಕಿತ್ತುಹೋಗಿ ಸ್ಪೋಟಗೊಂಡ ಬೆಂಕಿ ವ್ಯಾಪಿಸಲು ಕಾರಣವಾಗಿದೆ.
ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಗಾಯಗೊಂಡಿದ್ದು, ಈ ಪೈಕಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
Advertisement. Scroll to continue reading.