ಹೆಬ್ರಿ : ಹಲ್ಲೆಗೊಳಗಾಗಿದ್ದ ಮಹಿಳೆಗೆ ನೆರವಾದ ಶ್ರಮಿಕ ತರುಣರ ತಂಡ ಬೈರಂಪಳ್ಳಿ
Published
2
ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ; ಮುದ್ರಾಡಿಯ ದುರ್ಬಲ ಕುಟುಂಬದ ಮಹಿಳೆಗೆ ಬಂದ ಸಂಕಷ್ಟ, ಎರಡು ಹೆಣ್ಣುಮಕ್ಕಳೊಂದಿಗೆ ಕೂಲಿ ವೃತ್ತಿಯನ್ನು ಅವಲಂಬಿತಳಾಗಿ ಜೀವನ ಸಾಗಿಸುತ್ತಿದ್ದ ಪ್ರಮೋದ ಕುಲಾಲ್ ರವರನ್ನು ಕ್ಷುಲ್ಲಕ ಕಾರಣಕ್ಕಾಗಿ ಒಬ್ಬ ದುಷ್ಕರ್ಮಿ ಕತ್ತಿಯಿಂದ ಹಲ್ಲೆ ಮಾಡಿದ ಕಾರಣ ಕುತ್ತಿಗೆಯ ಭಾಗಕ್ಕೆ ವಿಪರೀತ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರೆ, ಚಿಕಿತ್ಸೆಗೆ ಆರ್ಥಿಕ ತೊಂದರೆ ಹಾಗೂ ಯಾವುದೇ ಪರಿಹಾರ ವ್ಯವಸ್ಥೆ ಇಲ್ಲದ ಕಾರಣ ಪರಿಜನರ ಮನವಿ ಶ್ರಮಿಕ ತರುಣರ ತಂಡಕ್ಕೆ ಬಂದಾಗ ಕಾರ್ಯಪ್ರವೃತ್ತರಾದ ಸಂಸ್ಥಾಪಕ ಸಂತೋಷ್ ಕುಮಾರ್ ಬೈರಂಪಳ್ಳಿ, ಅಧ್ಯಕ್ಷ ರಘುನಾಥ್ ಪೂಜಾರಿ ನೇತೃತ್ವದಲ್ಲಿ ತಂಡದ ನೆರವಿನೊಂದಿಗೆ ಸುಮಾರು 2.5 ಲಕ್ಷ ವೆಚ್ಚದಲ್ಲಿ 2 ಮುಖ್ಯ ಸರ್ಜರಿಯೊಂದಿಗೆ ಚಿಕಿತ್ಸೆ ಮಾಡಿಸಲಾಯಿತು.
ಮಾನವ ಹಕ್ಕುಗಳ ಸಂರಕ್ಷಣಾ ಪ್ರತಿಷ್ಠಾನನದ ಡಾಕ್ಟರ್ ರವೀಂದ್ರನಾಥ್ ಶಾನ್ ಬಾಗ್ ರವರೊಂದಿಗೆ ಚರ್ಚಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಲಾಯಿತು.