Uncategorized

ICC Women’s World Cup : ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

3

ಹ್ಯಾಮಿಲ್ಟನ್ : ಬಾಂಗ್ಲಾದೇಶ – ಭಾರತ ತಂಡದ ನಡುವೆ ನಡೆದ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಟೀಂ ಇಂಡಿಯಾ ನೀಡಿದ್ದ 230 ರನ್ ಗಳ ಗುರಿ ತಲುಪುವಲ್ಲಿ ಬಾಂಗ್ಲಾದೇಶ ಸೋತಿದ್ದು, ಕೇವಲ 119 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮಿಥಾಲಿ ಪಡೆ, 50 ಓವರ್ ಗಳಲ್ಲಿ 7 ವಿಕೆಟ್ ನಷ್ಟದೊಂದಿಗೆ 229 ರನ್ ಗಳಿಸಿತು. ಭಾರತದ ಬ್ಯಾಟ್ಸ್‌ಮನ್‌ಗಳ ಪೈಕಿ ಯುವ ಆಟಗಾರ ಯಾಸ್ತಿಕಾ ಭಾಟಿಯಾ ಅರ್ಧಶತಕ (50) ಗಳಿಸಿದರೆ, ಶಫಾಲಿ ವರ್ಮಾ (42), ಸ್ಮೃತಿ ಮಂಧಾನ (30), ಪೂಜಾ ವಸ್ತ್ರಕರ್ (30) ಮತ್ತು ಸ್ನೇಹಾ ರಾಣಾ (27) ಅಜೇಯರಾಗುಳಿದರು.

230 ರನ್ ಗಳ ಗುರಿಯೊಂದಿಗೆ ಕಣಕ್ಕಿಳಿದ ಬಾಂಗ್ಲಾ ತಂಡ, ಗುರಿ ತಲುಪಲು ವಿಫಲವಾಯಿತು. ಬಾಂಗ್ಲಾ ಬ್ಯಾಟ್ಸ್‌ಮನ್‌ಗಳ ಪೈಕಿ ಸಲ್ಮಾನ್ ಖಾತುನ್ 32 ರನ್ ಗಳಿಸಿದರೆ, ಲತಾ ಮೊಂಡಲ್ (24), ಮುರ್ಷಿದಾ ಖಾತುನ್ (19) ಮತ್ತು ರಿತು ಮೋನಿ (16) ಎರಡಂಕಿ ಗಳಿಸಿದರು. ಉಳಿದ ಬ್ಯಾಟರ್‌ಗಳು ಒಂದೇ ಅಂಕೆಗಳಿಗೆ ಸೀಮಿತವಾಗಿವೆ.

Advertisement. Scroll to continue reading.

ಇನ್ನು ಭಾರತದ ಬೌಲರ್‌ಗಳ ಪೈಕಿ ಸ್ನೇಹಾ ರಾಣಾ 4 ವಿಕೆಟ್ ಪಡೆದರು. ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಕರ್ ಚೆರೋ ತಲಾ 2 ವಿಕೆಟ್ ಪಡೆದರು. ರಾಜೇಶ್ವರಿ ಗಾಯಕ್ವಾಡ್ ಮತ್ತು ಪೂನಂ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.

ಅರ್ಧಶತಕದೊಂದಿಗೆ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಯಾಸ್ತಿಕಾ ಭಾಟಿಯಾ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಈ ಪಂದ್ಯದ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿ ಫೈನಲ್ ಭರವಸೆ ಜೀವಂತವಾಗಿದೆ. ಮುಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದರೆ ಭಾರತಕ್ಕೆ ಸೆಮಿಸ್‌ಗೆ ಪ್ರವೇಶಿಸಬಹುದಾಗಿದೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com