ಪೆರ್ಡೂರು : ಕೋಳಿ ಕೇಳುವ ನೆಪದಲ್ಲಿ ಕಳ್ಳನೊಬ್ಬ ಮನೆಗೆ ಬಂದು ಕರಿಮಣಿ ಎಗರಿಸಿ ಪರಾರಿಯಾಗಿರುವ ಘಟನೆ ನಿನ್ನೆ ಪೆರ್ಡೂರಿನಲ್ಲಿ ನಡೆದಿದೆ.
ಬಂಗ್ರಬೈಲು ನಿವಾಸಿ ಶೋಭಾ ಎಂಬವರ ಮನೆಗೆ ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ ಕೋಳಿ ಇದೆಯಾ ಎಂದು ಕೇಳಿದ್ದಾರೆ. ಮಹಿಳೆ ಇಲ್ಲವೆಂದು ಹೇಳಿದ್ದು, ಅತ ಇನ್ನೆರಡು ಮನೆಯಲ್ಲಿ ಕೋಳಿ ಇದೆಯ ಎಂದು ಕೇಳಿ ಬರುತ್ತೇನೆ ಎಂದು ಹೇಳಿ ಬೈಕಿನಲ್ಲಿ ತೆರಳಿದ್ದಾನೆ.
ಸ್ವಲ್ಪ ಸಮಯದ ನಂತರ ವಾಪಾಸು ಬಂದು ಎಲ್ಲಿಯೂ ಕೋಳಿ ಸಿಗಲಿಲ್ಲ ಎಂದು ಹೇಳಿವಶೋಭಾ ಅವರ ಮನೆಯ ಪಕ್ಕದಲ್ಲಿದ್ದ ಜಂಬು ನೇರಳೆ ಕಾಯಿಯನ್ನು ಕೊಯ್ಯಲಾರಂಭಿಸಿದ್ದಾನೆ. ಈ ವೇಳೆ ಶೋಭಾ ಅವರು ಅತನಿಗೆ ಪ್ಲಾಸ್ಟಿಕ್ ಕವರ್‌ನ್ನು ನೀಡಿ ಜಂಬು ನೇರಳೆ ಹಣ್ಣನ್ನು ನೋಡುತ್ತಿದ್ದ ಸಮಯದಲ್ಲಿ ಕಳ್ಳನು ಹಿಂದಿನಿಂದ ಬಂದು ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕೈಗಳಿಂದ ಎಳೆದು ತುಂಡು ಮಾಡಿ ಕಸಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
Advertisement. Scroll to continue reading.
ಕರಿಮಣಿ ಸರ 4 ಪವನ್ ದಾಗಿದ್ದು, ಅದರ ಮೌಲ್ಯ 1,20000/- ಆಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.