ನವದೆಹಲಿ: ಏಪ್ರಿಲ್ 1 ರಂದು ಪರೀಕ್ಷಾ ಪೆ ಚರ್ಚಾದ ಐದನೇ ಆವೃತ್ತಿ ನಡೆಯಲಿದೆ. ಈ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪರೀಕ್ಷೆಯ ಒತ್ತಡವನ್ನು ಹೋಗಲಾಡಿಸಲು ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನೀಡಲಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶುಕ್ರವಾರ ತಿಳಿಸಿದ್ದಾರೆ.
ಪ್ರತಿಯೊಬ್ಬ ಯುವಕರು ಎದುರುನೋಡುತ್ತಿರುವ ಸಂವಾದವು 1ನೇ ಏಪ್ರಿಲ್ ನಡೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಮಾರ್ಗದರ್ಶನ ಪಡೆಯಿರಿ ಹಾಗೂ ಸಲಹೆ ಪಡೆಯಿರಿ. ಒತ್ತಡ, ಹೆದರಿಕೆ ಮತ್ತು ಪರೀಕ್ಷೆಯ ಒತ್ತಡ ಸೋಲಿಸಲು ಸಲಹೆಗಳನ್ನು ಕಲಿಯಿರಿ. #ExamWarriors, ಶಿಕ್ಷಕರು ಮತ್ತು ಪೋಷಕರು #PPC2022 ಕ್ಕೆ ಸಿದ್ಧರಾಗಿ’ ಎಂದು ಪ್ರಧಾನ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಈ ಕಾರ್ಯಕ್ರಮವನ್ನು ಕಳೆದ ನಾಲ್ಕು ವರ್ಷಗಳಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಣ ಸಚಿವಾಲಯ ಆಯೋಜಿಸಿದೆ. ಪಿಪಿಸಿಯ ಮೊದಲ ಮೂರು ಆವೃತ್ತಿಗಳು ನವದೆಹಲಿಯಲ್ಲಿ ಟೌನ್-ಹಾಲ್ ಸಂವಾದಾತ್ಮಕ ಸ್ವರೂಪದಲ್ಲಿ ನಡೆದಿತ್ತು. ನಾಲ್ಕನೇ ಆವೃತ್ತಿಯು ಕಳೆದ ವರ್ಷ ಏಪ್ರಿಲ್ 7 ರಂದು ಆನ್‌ಲೈನ್‌ನಲ್ಲಿ ನಡೆದಿತ್ತು.
Advertisement. Scroll to continue reading.
ಇನ್ನು ಪಿಪಿಸಿ 2022 ಕ್ಕೆ 12.12 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 2.71 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಈ ವರ್ಷದ ಪಿಪಿಸಿ ಗಾಗಿ ನೋಂದಾಯಿಸಿಕೊಂಡಿದ್ದಾರೆ.