ಚಂದನವನ : ಎಲ್ಲರೂ ಎದುರು ನೋಡುತ್ತಿರುವ ಕೆಜಿಎಫ್ 2 ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ಅಂದುಕೊಂಡಂತೆ ಸಕತ್ತಾಗೆ ಇದೆ. ಚಿತ್ರದ ಕುರಿತ ನಿರೀಕ್ಷೆ ಮತ್ತೆ ಮತ್ತೆ ಹೆಚ್ಚುವಂತೆ ಮಾಡಿದೆ.
ಯಶ್ ಡೈಲಾಗ್ಸ್ ಆಕ್ಷನ್ ಸೀನ್ಸ್ ಎಲ್ಲವೂ ಅದ್ಭುತವೇ ಸರಿ. ಬಾಲಿವುಡ್ ತಾರೆಗಳಾದ ರವೀನಾ ಟಂಡನ್, ಸಂಜಯ್ ದತ್ ಟ್ರೇಲರ್ ನಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರ ನಿರೀಕ್ಷೆ ಹುಟ್ಟಿಸಿದೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿ ವಿಜಯ್ ಕಿರಂಗಂದೂರು ಬಂಡವಾಳ ಹೂಡಿದ್ದು, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಕೆ ಜಿ ಎಫ್ 2 ಮೂಡಿ ಬಂದಿದೆ. ಯಶ್ ಗೆ ಶ್ರೀನಿಧಿ ಶೆಟ್ಟಿ ನಾಯಕಿ. ಪ್ರಕಾಶ್ ರೈ, ಮಾಳಾವಿಕಾ, ಅಚ್ಯುತ್ ಕುಮಾರ್ ಮೊದಲಾದ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ. ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.
Advertisement. Scroll to continue reading.
ಏಪ್ರೀಲ್ 14ರಂದು ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ. ಸದ್ಯಕ್ಕೆ ಟ್ರೇಲರ್ ಸಕತ್ ಸೌಂಡ್ ಮಾಡಲು ಶುರು ಆಗಿದ್ದು, ಸಿನಿಮಾಗಾಗಿ ಕಾಯುವಂತೆ ಮಾಡಿದೆ.