ಬಾರಕೂರು : ತೈಲ ಸರಬರಾಜಿಲ್ಲದೆ ಮುಚ್ಚಿದೆ ಪೆಟ್ರೋಲ್ ಬಂಕ್; ಗ್ರಾಹಕರ ಪರದಾಟ
Published
4
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಲೆ ಇರುವುದರೊಂದಿಗೆ ಖಾಸಗಿ ತೈಲಗಳ ಬಂಕ್ ಗಳಲ್ಲಿ 2 ದಿನದಿಂದ ಪೆಟ್ರೋಲ್ ಸರಬರಾಜು ಇಲ್ಲದೆ ಖಾಸಗಿಯ ಹಲವಾರು ಬಂಕ್ ಗಳು ಮುಚ್ಚಿದೆ. ಉಡುಪಿಯ ಉತ್ತರ ಭಾಗದಲ್ಲಿರುವ ಏಕೈಕ ನಾಯರ ಎನರ್ಜಿ ಕೇಂದ್ರ ಇರುವ ಬಾರಕೂರಿನಲ್ಲಿ ಭಾನುವಾರದಿಂದ ಪೆಟ್ರೋಲ್ ಸರಬರಾಜು ಇಲ್ಲದೆ ಸಾರ್ವಜನಿಕರು ಅತಂಕ ವ್ಯಕ್ತಪಡಿಸುತ್ತಿದ್ದಾರೆ.
ಪ್ರತೀ ದಿನ ನೂರಾರು ವಾಹನಗಳು ಬರುವ ಪೆಟ್ರೋಲ್ ಬಂಕ್ ನಲ್ಲಿ ಇರುವ ಕಾರ್ಮಿಕರು ಗ್ರಾಹಕರಿಗೆ ಪೆಟ್ರೋಲ್ ಇಲ್ಲ ಎಂದು ಹೇಳುವುದೇ ಕೆಲಸವಾಗಿದೆ. ಇದರಿಂದ ಲಕ್ಷಾಂತರ ಕಾಮೀಕರಿಗೆ ಉದ್ಯೋಗ ನಷ್ಠದ ಭೀತಿ ಉಂಟಾಗಿದೆ.
Advertisement. Scroll to continue reading.
ಸಾರ್ವಜನಿಕ ಸ್ವಾಮ್ಯದ ಎಚ್ ಪಿ ಸಿ ಎಲ್ , ಐ ಓಸಿ , ಬಿಪಿ ಸಿಎಲ್ ಕಂಪೆನಿ ಯ ಎಲ್ಲಾ ಕೇಂದ್ರದಲ್ಲಿ ನಿರಂತರ ತೈಲ ಪೂರೈಕೆ ಯಾಗುತ್ತಿದೆ. ನಾಯರ್, ಶೆಲ್ ,ರಿಲಯನ್ಸ್ ಸೇರಿದಂತೆ ಖಾಸಗಿ ಕಂಪೆನಿಗಳು ಲೀಟರ್ ಒಂದರ 25 ರೂ ವ್ಯತ್ಯಾಸ ಇರುವುದರಿಂದ ಕಂಪೆನಿಗಳಿಗೆ ನಷ್ಟದ ಭೀತಿಯಿಂದಾಗಿ ಮುಚ್ಚುವ ಹಂತ ತಲುಪಿದೆ ಎನ್ನಲಾಗಿದೆ.