ಉಡುಪಿ : ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಬೇಕು ಎಂದು ಆಗ್ರಹಿಸಿ ಕರಾವಳಿ ಯೂತ್ ಕಾಂಗ್ರೆಸ್ ಮತ್ತು ಖ್ಯಾತ ಮನೋವೈದ್ಯ ಡಾ.ಪಿ ವಿ ಭಂಡಾರಿಯವರ ನೇತೃತ್ವದಲ್ಲಿ ಮಲ್ಪೆ ಬೀಚ್ ಗಾಂಧಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿಯವರ ಕಚೇರಿವರೆಗೆ ಮೌನ ಪಾದಯಾತ್ರೆ ನಡೆಯಿತು.
ಈ ಸಂದರ್ಭ ಮಾತನಾಡಿದ ಡಾ.ಪಿ.ವಿ.ಭಂಡಾರಿ, ಉಡುಪಿ ಜಿಲ್ಲೆಯಾಗಿ ಇಷ್ಟು ವರ್ಷ ಕಳೆದರೂ ರಾಜಕಾರಣಿಗಳು ನಮ್ಮನ್ನೆಲ್ಲಾ ಮೂರ್ಖರನ್ನಾಗಿ ಮಾಡಿದ್ದಾರೆ. ಆದ್ದರಿಂದ ಮೂರ್ಖರ ದಿನವನ್ನು ಅರ್ಥಪೂರ್ಣವನ್ನಾಗಿ ಆಚರಿಸಲು ಇಂದು ಮೌನ ಪಾದಯಾತ್ರೆ ನಡೆಸಿದ್ದೇವೆ ಎಂದರು.
ಪಾದಯಾತ್ರೆಯಲ್ಲಿ ಕರಾವಳಿ ಯೂತ್ ಕ್ಲಬ್ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.
Advertisement. Scroll to continue reading.