ಬಾರಕೂರು ವಿದ್ಯಾಭಿವರ್ಧಿನಿ ಸಂಘದ ಅಮೃತಮಹೋತ್ಸವ ಕಾರ್ಯಕ್ರಮ
Published
2
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಪ್ರೌಢ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಯನ್ನು ಹೊಂದಿದ ಬಾರಕೂರು ವಿದ್ಯಾಭಿವರ್ಧಿನಿ ಸಂಘದ ಅಮೃತಮಹೋತ್ಸವ ಕಾರ್ಯಕ್ರಮ ಮತ್ತು ಮನವಿ ಪತ್ರದ ಬಿಡುಗಡೆಯ ಉದ್ಘಾಟನೆ ಶನಿವಾರ ಕಾಲೇಜು ಸಭಾಂಗಣದಲ್ಲಿ 75 ವರ್ಷದ ಹಿಂದಿನ ಪ್ರಥಮ ಬ್ಯಾಚ್ ವಿದ್ಯಾರ್ಥಿ ಪಠೇಲ್ ಚಂದ್ರ ಶೇಖರ್ ರಾವ್ ಉದ್ಘಾಟಿಸಿದರು.
ಇನ್ನಿಬ್ಬರಾದ ಹಳೆ ವಿದ್ಯಾರ್ಥಿಗಳಾದ ಆನಂದ ಶೆಟ್ಟಿ ಮನವಿ ಪತ್ರ ಬಿಡುಗಡೆ ಮಾಡಿದರು. ಎಚ್. ಟಿ. ಪೂಜಾರಿ ನಾಮ ಫಲಕ ಅನಾವರಣ ಮಾಡಿದರು.
Advertisement. Scroll to continue reading.
ಈ ಸಂದರ್ಭ ಸಮಿತಿಯ ಗೌರವ ಸಲಹೆಗಾರ ನಿವೃತ್ತ ಪ್ರಿನ್ಸಿಪಾಲ್ ಸೀತಾರಾಮ ಶೆಟ್ಟಿ ಮಾತನಾಡಿ, ಬಾರಕೂರು ಕೇವಲ ದೇವಾಲಯಗಳ ನಗರ ಮಾತ್ರ ಅಲ್ಲ ವಿದ್ಯಾಲಯ ನಗರವಾಗಿ ಕೂಡಾ ಗುರುತಿಸಿಕೊಂಡಿದೆ. ಇಲ್ಲಿನ ಬುತೇಕ ಎಲ್ಲಾ ಶಿಕ್ಷಣ ಸಂಸ್ಥೆ ಹಲವು ಪ್ರಥಮಗಳ ಸಾಲಿನಲ್ಲಿದೆ ಹಳೆ ವಿದ್ಯಾರ್ಥಿಗಳು ಪ್ರಪಂಚದಾದ್ಯಂತ ನಾನಾ ಉನ್ನತ ಅಧಿಕಾರಿಯಾಗಿ ಜನಾನುರಾಗಿಯಾದವರು ಇದ್ದಾರೆ ಎಂದರು.
ಅಮೃತಮಹೋತ್ಸವ ಸಮಿತಿಯ ಅಧ್ಯಕ್ಷ ರಾಜಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಧಾದಿಕಾರಿಗಳಾದ ಶೇಡಿಕೊಡ್ಲು ವಿಠಲ್ ಶೆಟ್ಟಿ, ಚಂದ್ರ ಶೇಖರ ಶೆಟ್ಟಿ , ಬಿ ಎಂ ಸೋಮಯಾಜಿ , ಮಂಜುನಾಥ್ ಭಟ್, ರಾಮಚಂದ್ರ ಕಾಮತ್, ಗೋಪಾಲ್ ನಾಯ್ಕ್ , ಸುಧಾಕರ ರಾವ್, ಕೊಟ್ರಸ್ವಾಮಿ, ಕೃಷ್ಣ ಹೆಬ್ಬಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಹನೆಹಳ್ಳಿ ಭುಜಂಗ ಶೆಟ್ಟಿ ಅಮೃತ ಮಹೋತ್ಸವ ದೇಣಿಗೆಯಾಗಿ 75 ಸಾವಿರವನ್ನು ನೀಡಿದರು.
ಶಿಕ್ಷಣ ಸಂಸ್ಥೆಯ ಅನೇಕ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮ ರೂಪು ರೇಶೆಯ ಕುರಿತು ಅಭಿಪ್ರಾಯ ವ್ಯಕ್ತ ಪಡಿಸಿದರು.