ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಶುಕ್ರವಾರ ಚೇರ್ಕಾಡಿ ಗ್ರಾಮದ ಕನ್ನಾರು ಎಂಬಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ 24 ಗಂಟೆಯೊಳಗಾಗಿ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ಪೆಜಮಂಗೂರು ಗ್ರಾಮದ ಪ್ರಗತಿ ನಗರದ ಸುರೇಶ್ ಅಲಿಯಾಸ್ ಸೂರ್ಯ ಯಾನೆ ಕಪಿ(31) ಬಂಧಿತ ಆರೋಪಿ.
Advertisement. Scroll to continue reading.
ಕನ್ನಾರಿನ ವಾಸು ಪೂಜಾರಿ ರವರ ಮನೆಯಲ್ಲಿ ಅವರ ಹೆಂಡತಿ ಪ್ರೇಮ ಮನೆಯಲ್ಲಿ ಒಂಟಿಯಾಗಿದ್ದು, ಮನೆಯ ಹೊರಗಡೆ ಪಾತ್ರೆ ತೊಳೆಯುವಾಗ ಮನೆ ಹಿಂಬದಿ ಬಾಗಿಲ ಚಿಲಕ ಮುರಿದು ಒಳಪ್ರವೇಶಿಸಿ ಮನೆಯನ್ನು ಜಾಲಾಡಿ ಸುಮಾರು 10 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಅನ್ನು ಕಳವು ಮಾಡಿಕೊಂಡು ಹೋಗಿದ್ದ.
ಪ್ರಕರಣದ ಬೆನ್ನು ಬಿದ್ದ ಪೊಲೀಸರು ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ರವರ ಮಾರ್ಗದರ್ಶನದಂತೆ ಪಿ.ಎಸ್.ಐ.ಗುರುನಾಥ ಬಿ. ಹಾದಿಮನಿ ಹಾಗೂ ಪಿ.ಎಸ್.ಐ ಮುಕ್ತಾಬಾಯಿ ರವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಯಾವುದೇ ತಾಂತ್ರಿಕ ಸಹಾಯವಿಲ್ಲದೆ ಕೇವಲ ಪೊಲೀಸ್ ಸಂಪ್ರದಾಯಿಕ ವಿಧಾನದಲ್ಲಿ ಸಾರ್ವಜನಿಕರಿಂದ ತಳಮಟ್ಟದ ಮಾಹಿತಿ ಸಂಗ್ರಹಿಸಿ ಆರೋಪಿಯು ಕಳವು ಮಾಡಿದ ದಿವಸ ಧರಿಸಿದ ಬಟ್ಟೆಯ ಜಾಡನ್ನು ಹಿಡಿದು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ 50,000/- ರೂ ಬೆಲೆಬಾಳುವ ಚಿನ್ನದ ನೆಕ್ಲೇಸ್ ನ್ನು ವಶಪಡಿಸಿಕೊಂಡಿದ್ದಾರೆ. ಈಈತನು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಕಳ್ಳತನದ ಪ್ರಕರಣದ ಆರೋಪಿಯಾಗಿದ್ದ, ತಾಮ್ರ , ಚಿನ್ನದ ಕಿವಿಯೋಲೆ , ಉಂಗುರ ಕಳವು ಮಾಡಿರುತ್ತಾನೆ. ಆರೋಪಿಯು ಕಾನೂನು ಸಂಘರ್ಷಗೊಳಲಾದ ಬಾಲಕನಾಗಿ 07 ವರ್ಷ ರಿಮ್ಯಾಂಡ್ ಹೋಮ್ ನಲ್ಲಿ ಶಿಕ್ಷೆ ಅನುಭವಿಸಿರುವುದು ತನಿಖೆಯಲ್ಲಿ ಕಂಡುಬಂದಿರುತ್ತದೆ.
ಪ್ರಸ್ತುತ ಆರೋಪಿಯು ಬೆಂಗಳೂರಿನ ಬಿ.ಬಿಎಂ.ಪಿ.ಯಲ್ಲಿ ಕಸ ಗುಡಿಸುವ ಕೆಲಸ ಮಾಡಿಕೊಂಡಿರುತ್ತಾನೆ. ಬ್ರಹ್ಮಾವರ ಪೊಲೀಸ್ ಠಾಣಾ ಮೇಲಿನ ಪ್ರಕರಣದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ ಐಪಿಎಸ್, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ಕೆ.ಎಸ್.ಪಿ.ಎಸ್ ರವರ ಮಾರ್ಗದರ್ಶನದಂತೆ ಸುಧಾಕರ ನಾಯ್ಕ, ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪವಿಭಾಗರವರ ಹಾಗೂ ಅನಂತ ಪದ್ಮನಾಭ, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರ ರವರ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕರಾದ ಗುರುನಾಥ ಬಿ ಹಾದಿಮನಿ ಹಾಗೂ ತನಿಖೆ ಪಿ.ಎಸ್.ಐ ಶ್ರೀಮತಿ ಮುಕ್ತಾಬಾಯಿ ಹಾಗೂ ಪ್ರೊಬೆಷನರಿ ಪಿ.ಎಸ್.ಐ. ಸುಬ್ರಹ್ಮಣ್ಯ ದೇವಾಡಿಗ ಹಾಗೂ ಸಿಬ್ಬಂದಿಗಳಾದ ವೆಂಕಟರಮಣ ದೇವಾಡಿಗ, ಪ್ರವೀಣ್ ಶೆಟ್ಟಿಗಾರ್, ರಾಘವೇಂದ್ರ ಕಾರ್ಕಡ, ದಿಲೀಪ್ ಕುಮಾರ್, ಅಜ್ಮಲ್ ಮತ್ತು ಚಾಲಕ ಅಣ್ಣಪ್ಪ ಇವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
Advertisement. Scroll to continue reading.