ಉಡುಪಿ : ಸುಭೋದಿನಿ ಹಿರಿಯ ಪ್ರಾಥಮಿಕ ಶಾಲೆ ಅಲೆವೂರು: ನಿವೃತ್ತ ಮುಖ್ಯ ಶಿಕ್ಷಕರಾದ ರಾಘವ ನಾಯ್ಕ್, ಶ್ಯಾಮರಾಯ ಆಚಾರ್ಯರಿಗೆ ಸನ್ಮಾನ
Published
3
ವರದಿ : ಬಿ.ಎಸ್.ಆಚಾರ್ಯ
ಉಡುಪಿ : ಸುಭೋದಿನಿ ಹಿರಿಯ ಪ್ರಾಥಮಿಕ ಶಾಲೆ ಅಲೆವೂರು ಉಡುಪಿ ಇಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ರಾಘವ ನಾಯ್ಕ್ ಮತ್ತು ಶ್ಯಾಮರಾಯ ಆಚಾರ್ಯ ರನ್ನು ಶಾಲಾ ಆಡಳಿತ ಮಂಡಳಿ ಮತ್ತು ಹಳೆ ವಿದ್ಯಾರ್ಥಿಗಳು , ಊರ ಗಣ್ಯರು ಭಾನುವಾರ ಶಾಲಾ ರಂಗ ಮಂಟಪದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ಯಾಮರಾಯ ಆಚಾರ್ಯ, ಶಿಕ್ಷಕ ವೃತ್ತಿ ಶ್ರೇಷ್ಠವಾದುದು ನನ್ನ ಶಾಲಾ ದಿನದಲ್ಲೆಯೇ ಶಿಕ್ಷಕ ನಾಗಬೇಕು ಎನ್ನುವ ಕನಸು ಅಲೆವೂರು ಶಾಲೆಯಲ್ಲಿ ನನಸಾಗಿ ಸಾರ್ಥಕ ಭಾವ ಕಂಡಿದ್ದೇನೆ. ಈ ತನಕ ನಾನಾ ಭಾಗದಲ್ಲಿ ಹಲವಾರು ಸನ್ಮಾನಗಳಿಗಿಂತ ಇಂದಿನ ಸನ್ಮಾನ ಮರೆಯಲಾಗದ ಸನ್ಮಾನ ಎಂದರು.
ಶಾಲಾ ಸಂಚಾಲಕ ಡಾ.ರವಿರಾಜ್ ಶೆಟ್ಟಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಕುದಿ ವಸಂತ ಶೆಟ್ಟಿ , ಅಲೆವೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪ ಅಂಚನ್ , ನ್ಯಾಯವಾದಿ ಅಲೇವೂರು ಮಾಧವ ಆಚಾರ್ಯ, ಉದ್ಯಮಿ ಕಾರ್ತಿಕ್ ಶೆಟ್ಟಿ, ಕಿರಣ್ ಕುಮಾರ್ ರಾವ್, ಗಣಪತಿ ನಾಯಕ್, ಶಾಲಾ ಮುಖ್ಯೋಪಾದ್ಯಾಯಿನಿ ಪುಷ್ಪಲತಾ, ಶಾಲಾ ಮೆಲುಸ್ತುವಾರಿ ಸಮಿತಿಯ ಶೇಖರ ಆಚಾರ್ಯ, ಗೌರವಾಧ್ಯಕ್ಷೆ ವಾರಿಜಾ ಶೆಟ್ಟಿ, ವಿದ್ಯಾರ್ಥಿ ನಾಯಕಿ ಶ್ರೇಯಾ ಪ್ರಕಾಶ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಿಎ ಪ್ರಥಮ ಬಾರಿಗೆ ತೇರ್ಗಡೆಯಾದ ಶಾಲಾ ಹಳೆ ವಿದ್ಯಾರ್ಥಿ ದಿನೇಶ್ ಪ್ರಭು ಅವರನ್ನು ಗೌರವಿಸಲಾಯಿತು.