ಕೋಟ : ಪಂಕ್ಚರ್ ಆಗಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ; ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ
Published
3
ವರದಿ : ದಿನೇಶ್ ರಾಯಪ್ಪನಮಠ
ಕೋಟ : ಪಂಕ್ಚರ್ ಆಗಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಟದ ಮಣೂರಿನಲ್ಲಿ ನಡೆದಿದೆ.
ಪ್ರಸನ್ನ ಮೃತ ವ್ಯಕ್ತಿ. ಮೂವರು ಯುವಕರು ಬೈಕಿನಲ್ಲಿ ಕುಂದಾಪುರದ ಕಡೆಗೆ ತೆರಳುತ್ತಿದ್ದರು ಎನ್ನಲಾಗಿದೆ.
Advertisement. Scroll to continue reading.
ಈ ವೇಳೆ ಮಣೂರು ಬೊಬ್ಬರ್ಯ ಕಟ್ಟೆಯ ಬಳಿ ಲಾರಿಯೊಂದು ಪಂಚರ್ ಆಗಿ ನಿಂತಿತ್ತು. ಬಸ್ ಹಿಂಬಾಲಿಸಿಕೊಂಡು ಬಂದಿದ್ದ ಬೈಕ್ ಸವಾರನಿಗೆ ನಿಂತಿದ್ದ ಲಾರಿ ಗೋಚರಿಸಲಿಲ್ಲ. ಹೀಗಾಗಿ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಲಾಗಿದೆ.