ಬಾರಕೂರು : ರುದ್ರಭೂಮಿಯಲ್ಲಿ ಬೃಹತ್ ಶಿವನ ಪ್ರತಿಮೆ ಪ್ರತಿಷ್ಠಾಪನೆಗೆ ಶಿಲಾನ್ಯಾಸ
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಬಾರಕೂರು ಹನೆಹಳ್ಳಿ ಗ್ರಾಮಪಂಚಾಯತಿ ಬಳಿ ಇರುವ ಹಿಂದೂ ರುದ್ರ ಭೂಮಿಗೆ ಹೊಸ ಕಾಯಕಲ್ಪ ದೊರಕಲಿದೆ. ಸ್ಮಶಾನ ಅಂದರೆ ಭಯದ ವಾತಾವರಣ ದೂರ ಮಾಡಿ ಭಕ್ತಿಯೂ ಕೂಡಾ ಬರ ಬೇಕು ಎನ್ನುವ ದೃಷ್ಟಿಯಲ್ಲಿ ಇಲ್ಲಿನ ಸಾರ್ವ ಜನಿಕರು ದಾನಿಗಳು ಮತ್ತು ಗ್ರಾಮ ಪಂಚಾಯತಿ ವತಿಯಿಂದ ಬೃಹತ್ ಶಿವನ ಪ್ರತಿಮೆ ನೆಲೆಗೊಳ್ಳಲಿದೆ.
ಬುಧವಾರ ಬೆಳಿಗ್ಗೆ ವೇದ ಮೂರ್ತಿ ರಮೇಶ್ ಭಟ್ ನಾಯರ್ ಬೆಟ್ಟು ಇವರಿಂದ ನಾನಾ ಧಾರ್ಮಿಕ ಕಾರ್ಯಕ್ರಮ ಜರುಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರ ಶೇಖರ ಶೆಟ್ಟಿ ಶಿಲಾನ್ಯಾಸ ಮಾಡಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅರುಂಧತಿ ಏಸುಮನೆ ಕಾರ್ಯದರ್ಶಿ ಉಮೇಶ್ ಕಲ್ಯಾಣಪುರ , ಉಡುಪಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ ಗಾಣಿಗ , ನಿವೃತ್ತ ಮುಖ್ಯೋಪದ್ಯಾಯ ಸುಧಾಕರ ರಾವ್ , ಸಂತೋಷ ಪೂಜಾರಿ , ಅನಿಲ್ ಬೈಕಾಡಿ , ಗ್ರಾಮ ಪಂಚಾಯತಿ ಸದಸ್ಯರಾದ ರಮಾನಂದ ಶೆಟ್ಟಿ , ಚಂದ್ರ ಮರಕಾಲ , ಗಣೇಶ್ ಗಾಣಿಗ , ಜ್ಯೋತಿ, ಸುಜಾತ ಎಸ್ ಪೂಜಾರಿ, ಶಿಲ್ಪಿ ಪೂರ್ಣೆಶ್ ಇನ್ನಿತರು ಉಪಸ್ಥಿತರಿದ್ದರು . ಶವಾಗಾರ ಸೇರಿದಂತೆ ಒಟ್ಟು 56 ಸೆಣ್ಸ್ ಜಾಗದಲ್ಲಿ ಉಳಿದ ಖಾಲಿ ಜಾಗದಲ್ಲಿ ಹೂ ಗಿಡಗಳನ್ನು ಬೆಳೆಸುವ ಮತ್ತು ಮಿನಿ ಪಾರ್ಕ್ ಕೂಡಾ ಮಾಡುವ ಉದ್ದೇಶ ಗ್ರಾಮ ಪಂಚಾಯತಿಯ ಮುಂದಿನ ಯೋಜನೆಯಲ್ಲಿದೆ .